ಅತಿಯಾದ ನಿರೀಕ್ಷೆ ಅನೇಕ ಒತ್ತಡಗಳಿಗೆ ಕಾರಣ.


ಡಾ.ಎಸ್.ಬಿ.ಹಂದ್ರಾಳ
ಸಂಜೆವಾಣಿ ವಾರ್ತೆ
ಹೊಸಪೇಟೆ, ಜೂ.11: ಅಹಂಕಾರ ಬಿಟ್ಟು, ಅತಿಯಾಗಿ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಇರುವುದು ಒತ್ತಡ ರಹಿತ ಜೀವನಕ್ಕೆ ಸಹಕಾರಿಯಾಗಬಲ್ಲದು ಎಂದು ಖ್ಯಾತ ವೈದ್ಯ ಡಾ.ಬಿ.ಎಸ್‌. ಹಂದ್ರಾಳ ತಿಳಿಸಿದರು.
ಭಾನುವಾರ  ನೆಹರೂ ಕಾಲೋನಿಯ ಬಲ್ಡೋಟಾ ಪಾರ್ಕ್ ನಲ್ಲಿ ಪತಂಜಲಿ ಯೋಗ ಸಮಿತಿ ಆಯೋಜಿಸಿದ್ದ ವಿಶೇಷ ಯೋಗ ಶಿಬಿರ ಹಾಗೂ ಒತ್ತಡ ರಹಿತ ಜೀವನ ಶೈಲಿಗಾಗಿ ಯೋಗ ಕುರಿತು ಯೋಗಾಸನಗಳೊಂದಿಗೆ ಮಾತನಾಡಿ ಸಕಾರಾತ್ಮಕ ಯೋಚನೆಗಳು ನಮ್ಮ ಉತ್ಸಾಹಕ್ಕೆ ಸಹಕಾರಿಯಾಗಲಿವೆ ಎಂದರು. ಕೇವಲ ಸೂರ್ಯ ನಮಸ್ಕಾರದ 12ಭಂಗಿಗಳು ನಮ್ಮ ಸಂಪೂರ್ಣ ದೇಹವನ್ನು ಕ್ರಿಯಾಶೀಲಗೊಳಿಸುವುದರ ಜೊತೆ ಒತ್ತಡರಹಿತ ಜೀವನಕ್ಕೆ ನಮ್ಮ ದೇಹವನ್ನು ಸಶಕ್ತಗೊಳಿಸಲಿದ್ದು ಅವುಗಳ ನಿರಂತರ ಅಭ್ಯಾಸದ ಮೂಲಕ ದೇಹ ಸಮತೋಲನ ಕಾಯ್ದುಕೊಳ್ಳಬಹುದು ಎಂದು ಪ್ರತಿ ಭಂಗಿಯಲ್ಲಿ ಆಗುವ ಬದಲಾವಣೆ, ದೇಹ ಸಂಪರ್ಕ ಪ್ರಯೋಜನಗಳೊಂದಿಗೆ ಯೋಗಾಭ್ಯಾಸ ಮಾಡಿಸಿದರು.
 ವಿಶ್ವ ಯೋಗದಿನದ ಪೂರ್ವಭಾವಿ ಸಭೆ
ಇದೆ ಜೂನ್ 21ರಂದು ವಿಶ್ವಯೋಗದಿನ ವಿಶ್ವದಾದ್ಯಂತ ನಡೆಯುವಂತೆ ವಿಜಯನಗರ ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಲು ಸಭೆ ನಿರ್ಣಯಿಸಿತು.   ಜಿಲ್ಲಾಡಳಿತ, ಆಯುಷ್ಯ ಇಲಾಖೆಗಳೊಂದಿಗೆ ಚೆರ್ಚಿಸಿ ಸಹಯೋಗದಲ್ಲಿ ಇಲ್ಲವಾದರೆ ಪತಂಜಲಿ ಯೋಗ ಸಮಿತಿ ಅಥವಾ ಹಂಪಿ ವಿಶ್ವವಿದ್ಯಾಲಯದ ಯೋಗಕೇಂದ್ರದ ಸಹಯೋಗಲ್ಲಿಹಾಗೂ ಗಲಿ ಎಲ್ಲರೊಂದಿಗೆ ಅದ್ದೂರಿಯಾಗಿ ಆಚರಿಸಲು ತಿರ್ಮಾನಿಸಿದರು. ಯಾರೇ ಸ್ವತಂತ್ರವಾಗಿ ಕಾರ್ಯಕ್ರಮ ರೂಪಿಸುವುದಾರೂ ಅವರಿಗೆ ತರಬೇತುದಾರರನ್ನು ನಿಯೋಜಿಸುವುದು ಯೋಗದ ಮಹತ್ವ ತಿಳಿಸಿ ಹೆಚ್ಚು ಹೆಚ್ಚು ಜನ ನಿರೋಗಿಯಾಗುವಂತೆ ಸದೃಡ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗುವ ಕಾರ್ಯಕ್ಕೆ ಪತಂಜಲಿ ಯೋಗ ಸಮಿತಿಯ ಎಲ್ಲರೂ ಸಹಕಾರ ನೀಡಲು ಹಾಗೂ ಕಾರ್ಯಕ್ರಮ ರೂಪಿಸಲು ಸಭೆ ನಿರ್ಣಯಿಸಿತು.
ಯುವ ಪ್ರಭಾರಿ ಕಿರಣ್ , ಸಂಜಯಸ್ವಾಮಿ,
ನಾಗಪ್ಪ, ಡಾ.ಎಫ್ .ಟಿ.ಹಳ್ಳಿಕೇರಿ, ಉಮಾ ವಿಶ್ವನಾಥ, ಹೆಚ್. ಶ್ರೀನಿವಾಸರಾವ್. ಶ್ರೀನಿವಾಸ ಮಂಚಿಕಂಟಿ, ಡಾ.ಮಲ್ಲಿಕಾರ್ಜುನ, ಭೂಪಾಳ ರಾಘವೇಂದ್ರ ಶೆಟ್ಟಿ, ಮಲ್ಲಿಕಾರ್ಜುನ, ಕಟ್ಟಾ ಸುಬ್ರಮಣ್ಯ  ಕೃಷ್ಣ ಶಿರವಾರ ಸೇರಿದಂತೆ  ಹೊಸಪೇಟೆ ನಗರದ ವಿವಿಧ ಕೇಂದ್ರಗಳ ಸಂಚಾಲಕರು, ಯೋಗಾಸಕ್ತರು ಪಾಲ್ಗೊಂಡಿದ್ದರು.