ಅತಿಥಿ ಶಿಕ್ಷಕರ ಗೌರವ ಧನ ಬಿಡುಗಡೆಗೆ ಆಗ್ರಹಿಸಿ ಮನವಿ

ಚಿಂಚೋಳಿ,ಆ.2- ಬಾಕಿ ಉಳಿಸಿಕೊಂಡಿರುವ ಅತಿಥಿ ಶಿಕ್ಷಕರ ಗೌರವ ಧನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ತಹಶಿಲ್ದಾರರಾದ ಶ್ರೀಮತಿ ಅಂಜುಮ ತಬಸೂಮ್ ಅವರಿಗೆ ಪ್ರತ್ಯೇಕವಾಗಿ ಮನವಿ ಪತ್ರವನ್ನು ಸಲ್ಲಿಸಲಾಯಿತು.
ನಂತರ ಬಸವರಾಜ ಅಣವಾರ ರವರು ಮಾತನಾಡಿ ಶಿಕ್ಷಣ ಇಲಾಖೆಯ ಗುರಿ ಸಾಧನೆಗಾಗಿ ಹಾಗೂ ಮಕ್ಕಳ ಕಲಿಕಾ ಹಿತ ದೃಷ್ಠಿಯಿಂದ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದ್ದು,ಸರ್ಕಾರವು ನಿಗಧಿಪಡಿಸಿದ ಗೌರವಧನದಿಂದ ದೈನಂದಿನ ಜೀವನ ನಿರ್ವಹಣೆ ಕಷ್ಟಕರವಾಗಿದ್ದು ಕನಿಷ್ಠ 25000 ಗೌರವಧನ ನಿಗಧಿಯೊಂದಿಗೆ 2022-23ರ ಶೈಕ್ಷಣಿಕ ವರ್ಷದಲ್ಲಿ ಅತಿಥಿ ಶಿಕ್ಷಕರಾಗಿ ನೇಮಕಗೊಂಡು 2 ತಿಂಗಳು ಕಳೆಯುತ್ತಿದ್ದು ಗೌರವಧನ ಕೈಸೇರದ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ.
ಜೀವನ ನಿರ್ವಹಣೆ ಕಷ್ಟದಲ್ಲಿರುವ ನಮಗೆ ಗೌರವಧನ ಹೆಚ್ಚಿಸಬೇಕು, ಇದೇ ಗೌರವಧನದಲ್ಲಿಯೇ ಜೀವನ ನಿರ್ವಹಣೆಗೆ ಮಾಡುತ್ತಾರೆ ಸಕಾಲದಲ್ಲಿ ಬೀಡುಗಡೆ ಮಾಡಬೇಕು ಹಾಗೆ ನಮ್ಮ ಬೇಡಿಕೆಗಳಾದ ಗೌರವಧನ ಬಿಡುಗಡೆಯ ನಂತರ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ವೇತನ ಪಾವತಿಸಬೇಕು ರಜೆ ಪಡೆಯಲು ಅವಕಾಶ ನೀಡಬೇಕು ಅತಿಥಿ ಶಿಕ್ಷಕರಿಗೂ ಗುರುತಿನ ಚೀಟಿ ವಿತರಣೆ ಮಾಡುಬೇಕು ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಮುಂದುವರಿಸಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ಜಗನ್ನಾಥ ದೊಡ್ಡಮನಿ,ಜಗದೇವ ಗೌತಮ,ಶಿವಕುಮಾರ ತಳವಾರ,ನಂದುಕುಮಾರ ಪಾಟೀಲ,ರಾಜೇಂದ್ರಪ್ಪ ಹೊಸಮನಿ,ಸಂಜಿವಕುಮಾರ ಜಟ್ಟೆನೋರ್,ಮೋಹನ ಜಾಧವ,ಲಕ್ಷ್ಮಣ ಮಂಗಲಿಗಿ,ಸೇರಿದಂತೆ ತಾಲ್ಲೂಕಿನ ಇತರೆ ಅತಿಥಿ ಶಿಕ್ಷಕರು ಇದ್ದರು.