ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸಲು ಒತ್ತಾಯ

ರಾಯಚೂರು, ಜ.೧೬-ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ಮತ್ತು ಗೌರವಧನ ಹೆಚ್ಚಳ ಮಾಡುವಂತೆ ಅತಿಥಿ ಶಿಕ್ಷಕರ ಸಮತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ನೀಡಬೇಕು.
ಪ್ರತಿ ವರ್ಷ ಜೂನ್ ತಿಂಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು. ಪ್ರತಿ ತಿಂಗಳು ೧ನೇ ತಾರೀಖು ದಂದು ವೇತನ ಜಮಾ ಮಾಡಬೇಕು.
ಪ್ರತಿ ವರ್ಷ ಅಶಿಥಿ ಶಿಕ್ಷಕರ ನೇಮಕಾತಿ ಪಕ್ತಿಯಯಲ್ಲಿ ಅತಿಥಿ ಶಿಕ್ಷಕದ ಹಿಂದಿನ ಸೇವಾ ಹಿರಿತನವನ್ನು ಪರಿಗಣಿಸಿ ಮೊದಲ ಆಧ್ಯತೆ ನೀಡಬೇಕು.
ಶಿಕ್ಷಕರ ನೇಮಕಾತಿಯಲ್ಲಿ ಅತಿಥಿ ಶಿಕ್ಷಕರ ಸೇವೆಯನ್ನು ಪರಿಗಣಿಸಿ ೧ ವಾರ್ಷಕ್ಕೆ ೫ ಕೃಪಂಕ ನೀಡಬೇಕು. ಅತಿಥಿ ಶಿಕ್ಷಕರಿಗೆ ಕನಿಷ್ಠ ೨೦ ಸಾವಿರ ಗೌರವಧನ ನೀಡಬೇಕು. ಖಾಯಂ ಶಿಕ್ಷಕರಿಗೆ ಸರಿಸಮಾನವಾಗಿ ಕೆಲಸ ಮಾಡುತ್ತಿರುವ ನಮಗೂ ಅಜನ ತಿಂಗಳಲ್ಲಿ ಪೂರ್ಣವೇತನ ನೀಡಬೇಕು. ಪ್ರತಿ ಶೈಕ್ಷಣಿಕ ವರ್ಷ ಟೂನ ೧ ರಿಂದ ಏಪ್ರಿಲ್ ೧೦ ರವರೆಗೂ ನಡೆಯುವ ಶೈಕ್ಷಣಿಕ ಚಟುವಟಿಕೆಗಳಲ್ಲಿ
ನಮ್ಮನ್ನು ಮಾರ್ಚ್ ೩೧ ಬಿಡುಗಡೆಗೊಳಿಸದೇ ಏಪ್ರಿಲ್ ೧೦ರ ವರೆಗೂ ವಿಸ್ತರಿಸಬೇಕು. ಅತಿಥಿ ಶಿಕ್ಷಕರಿಗೆ ಆರ್ಥಿಕ ಭದ್ರತೆಗಾಗಿ ಪಿ.ಎಫ್. ಮತ್ತು ಇಎಸ್.ಐ. ಗಳನ್ನು ನೀಡಬೇಕು. ಶಿಕ್ಷಕರ ನೇಮಕಾತಿಯಲ್ಲಿ ಶೇ ೫ ರಷ್ಟು ಹುದ್ದೆಗಳನ್ನು ಅತಿಥಿ ಶಿಕ್ಷಕರಿಗೆ ಮೀಸಲಿಡಬೇಕು.
ಅತಿಥಿ ಶಿಕ್ಷಕರು ಕರ್ತವ್ಯದ ವೇಳೆ ಜೀವ ಹಾನಿ ಉಂಟದಾಗ ಸರಕಾರದಿಂದ ಪರಿಹಾರ ಧನ ನೀಡಬೇಕು.ಸರಕಾರಿ ನೌಕರರಿಗೆ ವಾರ್ಷಿಕವಾಗಿ ಸಾಂಧರ್ಬಿಕ ರಜೆ (ಸಿಎಲ್) ಮತ್ತು ಎರಡು ನಿರ್ಭಂದಿತ ರಜೆ (ಆರ್.ಹೆಟ್) ಇರುವ ಆಗ ಕನಿಷ್ಠ ಮಾನವಿಯ ದೃಷ್ಟಯಿಂದ ತಿಂಗಳಿಗೆ ೧ ಸಿಎಲ್, ಅನ್ನು ಅತಿಥಿ ಶಿಕ್ಷಕರಿಗೆ ನೀಡಬೇಕು.
ಈ ಸಂದರ್ಭದಲ್ಲಿ ಜಿ ಕೆ ನಾಗರಾಜ, ವಿದ್ಯಾಲಕ್ಷ್ಮಿ, ಚಂದ್ರಕಲಾ, ಮಲ್ಲೇಶ್ವರಿ, ಶರಣಬಸವ, ಮಲ್ಲಿಕಾರ್ಜುನ ಸೇರಿದಂತೆ ಉಪಸ್ಥಿತರಿದ್ದರು.