ಅತಿಥಿ ಶಿಕ್ಷಕರಿಗೆ ಆಹಾರ ಕಿಟ್ ವಿತರಣೆ

ಮಾನ್ವಿ,ಜೂ.೦೪-ಪಟ್ಟಣದ ಸರ್ಕಾರಿ ಕನ್ಯಾ ಶಾಲೆಯಲ್ಲಿ ಡಾ. ಅಂಬಿಕಾ ಮಧುಸೂಧನ್ ಅವರಿಂದ ತಾಲೂಕಿನ ೫೦ ಜನ ಅತಿಥಿ ಶಿಕ್ಷಕರಿಗೆ ಆಹಾರ ಕಿಟ್ ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು, ದೇಶದಲ್ಲಿ ಕರೋನಾ ವ್ಯಾಪಕವಾಗಿ ಹರಡಿದ್ದು ಸರ್ಕಾರವು ಸಂಪೂರ್ಣವಾಗಿ ಲಾಕಡೌನ್ ಜಾರಿ ಮಾಡುವುದ್ದರಿಂದ ಪ್ರತಿಯೊಬ್ಬರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಅದರಲ್ಲೂ ಅತಿಥಿ ಶಿಕ್ಷಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅತಿಥಿ ಶಿಕ್ಷಕರ ತೊಂದರೆಯನ್ನು ಮನಗಂಡು ಸಣ್ಣ ಅಳಿಲು ಸೇವೆ ಮಾಡಿದ್ದೇನೆ. ಇಂತಹ ವೇಳೆಯಲ್ಲಿ ಪ್ರತಿಯೊಬ್ಬರು ಸಹಾಕರಕ್ಕೆ ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಹಂಪಣ್ಣ ಚಂಡೂರು, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷ ಗೋಪಾಲ ನಾಯಕ ಜೂಕೂರು, ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಹನಮಂತ ಯಡಿವಾಳ, ಗೌರವಾಧ್ಯಕ್ಷ ಮೋಹಿದ್ದೀನ್ ಸಾಬ್ ಮಾಚನೂರು, ಪ್ರ.ಕಾರ್ಯದರ್ಶಿ ಮರಿಸ್ವಾಮಿ ಮದ್ಲಾಪೂರು ಸೇರಿದಂತೆ ಅನೇಕರು ಇದ್ದರು.