ಅತಿಥಿ ಶಿಕ್ಷಕರಿಂದ ಪದವೀಧರ ಶಿಕ್ಷಕರಾಗಿ ಆಯ್ಕೆ, ಸನ್ಮಾನ

ಮಾನ್ವಿ,ಮಾ.೨೬- ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇಂದು ಪದವೀಧರ ಶಿಕ್ಷಕರಾಗಿ ಆಯ್ಕೆಯಾಗಿರುವ ಸಿರವಾರ ಹಾಗೂ ಮಾನವಿ ತಾಲೂಕಿನ ೨೮ ಶಿಕ್ಷಕರಿಗೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಅತಿಥಿ ಶಿಕ್ಷಕರ ಸಂಘದ ಪದಾಧಿಕಾರಿಗಳಿಂದ ಸನ್ಮಾನಿಸಲಾಯಿತು.
ಪಟ್ಟಣದ ಎ ಪಿ ಎಂ ಸಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮವನ್ನು ದೀಪಾ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಮಾತಾನಾಡಿದ ಮುಖಂಡ ರಾಮಚಂದ್ರ ನಾಯಕ ಇವರು
ಕಳೆದ ಹಲವಾರು ವರ್ಷಗಳಿಂದ ಅತಿಥಿ ಶಿಕ್ಷಕನಾಗಿ ಸೇವೆ ಸಲ್ಲಿಸಿ ಮೊನ್ನೆ ನಡೆದ ಸರ್ಕಾರಿ ಶಿಕ್ಷಕರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರಿ ನೌಕರಿಗೆ ಆಯ್ಕೆಯಾಗಿದ್ದು ತುಂಬಾ ಸಂತೋಷದ ವಿಷಯವಾಗಿದೆ ಎಂದು ಮುಖಂಡ ರಾಮಚಂದ್ರ ನಾಯಕ ಹೇಳಿದರು.
ನಂತರ ಪ್ರಾಸ್ತಾವಿಕವಾಗಿ ತಾಲೂಕ ಅಧ್ಯಕ್ಷ ಹನುಮಂತ ಯಡಿವಾಳ ಮಾತಾನಾಡಿ ರಾಜ್ಯದಲ್ಲಿ ಅತಿಥಿ ಶಿಕ್ಷಕರ ಅನೇಕ ಸಮಸ್ಯೆಗಳನ್ನು ಇದ್ದರು ಕೂಡ ಸರ್ಕಾರ ನಮ್ಮನ್ನು ಕಡೆಗಣಿಸುತ್ತಿದೆ ಹಾಗೂ ಅನೇಕ ವರ್ಷಗಳಿಂದ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಕೃಪಾಂಕ ಆಧಾರ ಮೇಲೆ ಅವರನ್ನು ಆಯ್ಕೆ ಮಾಡಿಕೊಳಬೇಕು ಬಹು ಮುಖ್ಯವಾದ ನಮಗೆ ನೀಡುವ ವೇತನದಲ್ಲಿ ಹೆಚ್ಚಳ ಮಾಡಬೇಕು ಸೇರಿದಂತೆ ನಮ್ಮ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವಂತೆ ನಮ್ಮ ಸಂಘದ ರಾಜ್ಯ ಅಧ್ಯಕ್ಷ ಹನುಮಂತ ಎಚ್ ಎಸ್ ಅವರು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದರು.
ನಂತರ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇಂದು ಸರ್ಕಾರಿ ನೌಕರರಾಗಿ ಆಯ್ಕೆಯಾದ ಒಟ್ಟು ೨೮ ಜನ ಶಿಕ್ಷಕರಿಗೆ ಹಾಗೂ ವೇದಿಕೆ ಮೇಲಿದ್ದ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಹನುಮಂತ ಹೆಚ್ ಎಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಂಗಮೆಶ ಮುಧೋಳ,ಸರ್ಕಾರಿ ನೌಕರ ಸಂಘ,ಶ್ರೀಶೈಲ್ ಗೌಡ, ಬಿಇಓ ಚಂದ್ರಶೇಖರ ದೊಡ್ಡ ಮನಿ, ಅತಿಥಿ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹನುಮಂತ ಯಡಿವಾಳ, ಶಿಕ್ಷಕರಾದ ಮೂಕಪ್ಪಕಟ್ಟಿಮನಿ, ಅಕ್ಷರ ದಾಸೋಹ ಅಧಿಕಾರಿ ಸುರೇಶ ನಾಯಕ, ರವಿಕುಮಾರ ವಕೀಲರು, ಪದವೀಧರರ ಸಂಘದ ಅಧ್ಯಕ್ಷ ಗೋಪಾಲ ನಾಯಕ ಜೂಕೂರು, ಕಾರ್ಯದರ್ಶಿ ಇಸಾಖ್ ಮಾನ್ವಿ, ದೇವರಾಜ ಶರಣಬಸವ ಸಿಂಧನೂರು, ಧನಲಕ್ಷ್ಮೀ, ಸಿದ್ದಲಿಂಗಮ್ಮ, ಚನ್ನಬಸಮ್ಮ, ಪರಿಮಳ, ಮೆಹಬೂಬ್ ಮದ್ಲಾಪೂರ, ಮರಿಸ್ವಾಮಿ ಮದ್ಲಾಪೂರ, ಸೇರಿದಂತೆ ನೂರಾರು ಶಿಕ್ಷಕರು ಭಾಗವಹಿಸಿದ್ದರು.