ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದವರಿಗೆ ಅತಂತ್ರ ಸ್ಥಿತಿ

ರಾಯಚೂರು,ಜೂ.೦೨- ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷ ೩೨೬೫೯ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರಾಗಿ ಅತ್ಯಂತ ಕಡಿಮೆ ವೇತನಕ್ಕೆ ಸೇವೆ ಸಲ್ಲಿಸಿ, ಯಾವುದೇ ಸೇವಾಭದ್ರತೆ ಇಲ್ಲದೆ ಸರಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಆದರೆ ೨೦೨೩-೨೪ ನೇ ಶೈಕ್ಷಣಿಕ ವರ್ಷದಲ್ಲಿ ಸರಕಾರ ಹೊರಡಿಸಿರುವ ಅತಿಥಿ ಶಿಕ್ಷಕರ ನೇಮಕಾತಿ ಆದೇಶದ ಕೆಲವು ಷರತ್ತುಗಳಿಂದಾಗಿ ಬಹಳ ವರ್ಷ ಸೇವೆ ಸಲ್ಲಿಸಿದ ಅತಿಥಿ ಶಿಕ್ಷಕರು ಅತಂತ್ರ ಸ್ಥಿತಿಯಲ್ಲಿ ಇದ್ದಾರೆ ಎಂದು ಕಲ್ಯಾಣ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷರಾದ ದುರಗಪ್ಪ ಅಮರಾವತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಕರ್ನಾಟಕ ರಾಜ್ಯ ಸರಕಾರ ಹೀಗಾಗಲೇ ಹೊರಡಿಸಿರುವ ಅತಿಥಿ ಶಿಕ್ಷಕರ ನೇಮಕಾತಿ ಆದೇಶ ಪತ್ರವನ್ನು ಹಿಂಪಡೆಯಬೇಕು ಹಾಗೂ ಮೆರಿಟ್ ಪದ್ದತಿಯನ್ನು ಕೈ ಬಿಟ್ಟು, ಮೊದಲು ಮಾಡಿದವರಿಗೆ ಮೊದಲ ಆದ್ಯತೆಯನ್ನು ಕೊಡಬೇಕು. ಹಾಗೂ ಕನಿಷ್ಠ ೨೫,೦೦೦ ಸಾವಿರ ವೇತನ ಹೆಚ್ಚಳ, ಪ್ರತಿ ವರ್ಷ ೩% ಕೃಪಾಂಕಗಳನ್ನು ನೀಡುವಿಕೆ, ಪ್ರತಿ ತಿಂಗಳು ವೇತನ ಬಟವಾಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಹಿಡೇರಿಸಬೇಕು ಎಂಬುದು ನಮ್ಮ ರಾಜ್ಯದ ಸಮಸ್ತ ಅತಿಥಿ ಶಿಕ್ಷಕರ ಒತ್ತಾಯವಾಗಿದೆ ಎಂದು ದುರಗಪ್ಪ ಅಮರಾವತಿ ತಿಳಿಸಿದರು.