ಅತಿಥಿ ಶಿಕ್ಷಕರನ್ನು ಖಾಯಂಗೊಳಿಸುವಂತೆ ಶಾಸಕರಿಗೆ ಮನವಿ

ಮಾನ್ವಿ,ಮಾ.೨೬- ರಾಜ್ಯಾದ್ಯಂತ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಒಟ್ಟು ೩೨ ಸಾವಿರ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು ದೆಹಲಿ, ಪಂಜಾಬ್, ಹರಿಯಾಣ ಮಾದರಿಯಲ್ಲಿ ಅತಿಥಿ ಶಿಕ್ಷಕರನ್ನು ಖಾಯಂಗೊಳಿಸುವಂತೆ ಕಲ್ಯಾಣ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಾಲೆ ಅತಿಥಿ ಶಿಕ್ಷಕರ ಸಂಘ ಶಾಸಕ ರಾಜಾ ವೆಂಕಟಪ್ಪ ನಾಯಕರಿಗೆ ಇಂದು ಶಾಸಕರ ಕಾರ್ಯಾಲಯದಲ್ಲಿ ಮನವಿ ಪತ್ರ ಸಲ್ಲಿಸಿದರು.
ರಾಜ್ಯದಲ್ಲಿ ೨೦೧೨ರಿಂದ ಸರಕಾರ ಅತಿಥಿ ಶಿಕ್ಷಕರನ್ನು ಪ್ರತಿ ವರ್ಷ ಶೈಕ್ಷಣಿಕ ಸಾಲಿನ ವರೆಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡು ನಂತರ ಕೈಬಿಡುತ್ತದೆ. ಅಲ್ಲದೆ ಆತ್ಯಂತ ಕಡಿಮೆ ವೇತನ ಕೇವಲ ೧೦,೫೦೦ ರೂ. ಗೌರವಧನ ನೀಡುವ ಮೂಲಕ ಯಾವುದೇ ಸೇವಾ ಭದ್ರತೆ, ಕನಿಷ್ಠ ವೇತನ ೨೫೦೦೦.ರೂ. ಕೂಡ ನೀಡದೇ ದುಡಿಸಿಕೊಳ್ಳತ್ತಿದ್ದು, ಇದರಿಂದ ಶೈಕ್ಷಣಿಕವಾಗಿ ಮಕ್ಕಳಿಗೆ ಶಿಕ್ಷಣ ಇಲಾಖೆಗೆ ಆಗುತ್ತಿದ್ದ ಹೊರೆಯನ್ನು ತಪ್ಪುಸಲಾಗಿದೆ.ಅಲ್ಲದೆ ಸರಕಾರ ನೀಡುವ ಸಂಬಳದಿಂದ ಅತಿಥಿ ಶಿಕ್ಷಕರ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕೆಲಸ ಮಾಡುವ ಅತಿಥಿ ಶಿಕ್ಷಕರು ಎಲ್ಲಾ ರೀತಿಯ ಅರ್ಹತೆಯನ್ನು ಹೊಂದಿದ್ದು ದೆಹಲಿ, ಪಂಜಾಬ್, ಹರಿಯಾಣ ರಾಜ್ಯಗಳ ಮಾದರಿಯಲ್ಲಿ ಅತಿಥಿ ಶಿಕ್ಷಕರನ್ನು ಸರ್ಕಾರಿ ಶಿಕ್ಷಕರನ್ನಾಗಿ ಖಾಯಂಗೊಳಿಸುವಂತೆ ಈ ನಿಟ್ಟಿನಲ್ಲಿ ತಾವುಗಳು ನಮ್ಮಪರವಾಗಿ ಸರ್ಕಾರ ಮತ್ತು ಸಚಿವರ ಮೇಲೆ ಒತ್ತಡ ಹಾಕುಬೇಕು ಹಾಗೂ ಏಪ್ರಿಲ್ ತಿಂಗಳಲ್ಲಿ ನಡೆಯುವ ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷೆ ವೇಳೆ ಅತಿಥಿ ಶಿಕ್ಷರನ್ನು ಪರೀಕ್ಷಾ ಕೊಠಡಿ ಮೇಲ್ವಿಚಾರಕನ್ನಾಗಿ ಮತ್ತು ಪರೀಕ್ಷೆ ಮೌಲ್ಯಮಾಪನ ಕರ್ತವ್ಯಕ್ಕೆ ನಿಯೋಜಿಸುವಂತೆ ಸಂಬಂಧಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮತ್ತು ಅಧಿಕಾರಿಗಳ ಗಮನಕ್ಕೆ ತರುವಂತೆ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ದುರಗಪ್ಪ ಅಮರಾವತಿ, ಪ್ರಧಾನ ಕಾರ್ಯದರ್ಶಿ ನವೀನ ಕುಮಾರ, ಉಪಾಧ್ಯಕ್ಷ ಮೌಲಸಾಬ್, ಗೋವಿಂದರಾಜ,ದುರುಗಪ್ಪ ದೋತರಬಂಡಿ, ನಾಗರಾಜ ಪಾತಪೂರ, ಸಹಕಾರ್ಯದರ್ಶಿ ಪಿ.ಶಾಂತಿಮೂರ್ತಿ ಹಾಗೂ ಸಂಘಟನಾ ಕಾರ್ಯದರ್ಶಿ ರವಿಚಂದ್ರ, ವಿಶ್ವನಾಥ ಕೊರವಿ, ಮುರಳಿಮೋಹನ, ಮಂಜುನಾಥ ಹಣಗಿ, ತ್ರಿವೇಣಿ, ಮಂಜುಳಾ, ಶಶಿಕಲಾ ಸೇರಿದಂತೆ ಅನೇಕರಿದ್ದರು.