ಅತಿಥಿ ಬಿಟ್ಟು ಶಿಕ್ಷಕ ಎಂದು ಭಾವಿಸಿ: ವಿಜಯಲಕ್ಷ್ಮಿ

ಚಿತ್ತಾಪೂರ:ಸೆ.10:ಅತಿಥಿ ಶಿಕ್ಷಕರು ಅತಿಥಿ ಎಂಬುದು ಬಿಟ್ಟುಬಿಡಿ ಶಿಕ್ಷಕ ಎಂದು ಭಾವಿಸಿ ನಿಮ್ಮ ಮನೋಭಾವನೆ ಬದಲಾಯಿಸಿಕೊಳ್ಳಿ ಎಂದು ಡಯಟ್ ಹಿರಿಯ ಉಪನ್ಯಾಸಕಿ ಶ್ರೀಮತಿ ವಿಜಯಲಕ್ಷ್ಮೀ ಹೇಳಿದರು.

ಪಟ್ಟಣದ ಬಿಆರ್ ಸಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅತಿಥಿ ಶಿಕ್ಷಕರಿಗೆ ಎರಡು ದಿನದ ತರಬೇತಿ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಅವರು ಶಾಲೆಗೆ ಹೋಗುವ ಮುನ್ನ ಶಿಕ್ಷಕರಿಗೆ ಪಾಠ ಬೋಧನೆಗೆ ವಿಷಯ ಸಂಗ್ರಹ ಇರಬೇಕು,ಮಕ್ಕಳ ಸಮಗ್ರ ಮಾಹಿತಿ ಇರಬೇಕು, ಯಾವ ಮಗು ಕಲಿಕೆಯಿಂದ ಹಿಂದುಳಿದಿದೆ ಆ ಮಗುವನ್ನು ಕಲಿಕೆಗೆ ಉತ್ತೇಜನ ನೀಡಬೇಕು, ಶಾಲಾ ಮಕ್ಕಳು ನಿಮ್ಮ ಜೊತೆಗೆ ಬೆರೆಯಬೇಕು ಆಗ ಕಲಿಕೆ ಅರ್ಥಪೂರ್ಣ ಆಗುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿ ಟಿಇಟಿ, ಸಿಇಟಿ ಪರೀಕ್ಷೆ ಪಾಸ್ ಆಗಿ ಕಾಯಂ ಶಿಕ್ಷಕರಾಗಿ ಎಂದು ಆಶಿಸಿದರು.
ನೀವು ಕಲಿಸುವ ಶಾಲೆಯಲ್ಲಿ ಮನಸ್ಸಪೂರ್ವಕವಾಗಿ ಕಲಿಕೆ ನೀಡಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಯಟ್ ನ ನಿಂಗಾರಾಜ್ ಮೂಲಿಮನಿ, ಬಿಆರ್ ಪಿ ಮಲ್ಲಿಕಾರ್ಜುನ ಸೇಡಂ, ಬನ್ನಮ್ಮ, ಅಜಿಮ್ ಪ್ರೇಮಜಿ ಪೌಂಡೇಶನ್ ಸಿಬ್ಬಂದಿಗಳಾದ ಸಂತೋಷ, ರೇಣುಕಾ, ಶೃತಿ, ಜಾಫರ್ ಸೇರಿದಂತೆ ಅತಿಥಿ ಶಿಕ್ಷಕರ ಇದ್ದರು.