ಅತಿಥಿ ಉಪನ್ಯಾಸಕರ ಸೇವೆ ಖಾಯಂಗೆ ಒತ್ತಾಯ


(ಸಂಜೆವಾಣಿ ವಾರ್ತೆ)
ಬಳ್ಳಾರಿ: ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಒದಗಿಸಬೇಕು ಮತ್ತು ಎರಡೂವರೆ ತಿಂಗಳ ಗೌರವಧನ ಬಿಡುಗಡೆ ಮಾಡುಬೇಕೆಂದು ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಅತಿಥಿ ಉಪನ್ಯಾಸಕರು ಜಿಲ್ಲಾಡಳಿತಕ್ಕೆ ನಿನ್ನೆ ಸಲ್ಲಿಸುದ್ದಾರೆ.
ಸಂಘದ ಅಧ್ಯಕ್ಷ ಡಾ. ದುರುಗಪ್ಪ ಮೊದಲಾದವರು ಮನವಿ ಸಲ್ಲಿಸಿ.   ಕಳೆದ ಹದಿನೈದು- ಇಪ್ಪತ್ತು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ.ಗಳ ಹಣವನ್ನು ಉಳಿಸಲಾಗಿದೆ. ಆದರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಓದುತ್ತಿರುವ “ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಬಡ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದ ನಮ್ಮ ಬದುಕು ತಳಮಟ್ಟವನ್ನು ತಲಪಿ ಬದುಕು ಆರೋಗತಿಗೆ ತಲುಪಿದೆ, ಯಾವ ಸರ್ಕಾರಗಳು, ಸಹ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಲು ಮುಂದಾಗಿರುವುದಿಲ್ಲ.

 ತಮ್ಮ ನೇತೃತ್ವದ ಸರ್ಕಾರವು 2022ರ ಚುನಾವಣೆಯಲ್ಲಿ ಅತಿಥಿ ಉಪನ್ಯಾಸಕರ ಸೇವಾ ಭದ್ರತೆಯ ಬಗ್ಗೆ ಚುನಾವಣಾ ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಿ ಆಶಾಭಾವನೆಯನ್ನು ಮೂಡಿಸಿರುತ್ತೀರಿ, ಆದಷ್ಟು ಬೇಗನೆ ಸೇವಾ ಭದ್ರತೆಯನ್ನು ನೀಡಿ ಆತಿಥಿ ಉಪನ್ಯಾಸಕರ ಜೀವನ ಭದ್ರತೆಗೆ ಮುಂದಾಗಬೇಕು.  ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಕಳೆದ  ಎರಡೂವರೆ ತಿಂಗಳ  ಗೌರವಧನವನ್ನು ನೀಡಬೇಕು ಎಂದು ಕೋರಿದ್ದಾರೆ.

One attachment • Scanned by Gmail