ಅತಿಥಿ ಉಪನ್ಯಾಸಕರ ಖಾಯಂಗೆ ಒತ್ತಾಯ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.10:  ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆ ಖಾಯಂಗೊಳಿಸಬೇಕು,  ಬಾಕಿ ಇರುವ ವೇತನ ಬಿಡುಗಡೆ ಮಾಡಬೇಕೆಂದು ಮತ್ತೊಮ್ಮೆ ಕಾಂಗ್ರೆಸ್ ಆಡಳಿತದ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕ ಒತ್ತಾಯಿಸಿದೆ.
ಸಂಘದ ಪದಾಧಿಕಾರಿಗಳು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ. ರಾಜ್ಯದಲ್ಲಿ 11 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಆದರೆ ಅತಿ ಉಪನ್ಯಾಸಕರ ಭವಿಷ್ಯ ಆತಂತ್ರ ಸ್ಥಿತಿಯಲ್ಲಿದೆ. ಅವರಿಗೆ ಸೇವಾ ಭದ್ರತೆ ಇಲ್ಲದಂತಾಗಿದೆ. ಇದರಿಂದಾಗಿ ಪ್ರತಿ 10 ತಿಂಗಳಿಗೊಮ್ಮೆ ಆನ್‌ಲೈನ್‌ನಲ್ಲಿ ನವೀಕರಣ ಮಾಡಿಕೊಳ್ಳಬೇಕಿದೆ. ಹೀಗೆ  ಕಳೆದ 25 ವರ್ಷಗಳಿಂದ ಸರ್ಕಾರ ಅತಿಥಿ ಉಪನ್ಯಾಸಕ ಎಂಬ ಪದದಡಿ ಕಡಿಮೆ ವೇತನದಲ್ಲಿ ದುಡಿಸಿಕೊಳ್ಳುತ್ತಿತ್ತು.
ಆದರೆ ಕಳೆದ ಬಿಜೆಪಿಯ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ  ಅತಿಥಿ ಉಪನ್ಯಾಸಕರಿಗೆ 13 ಸಾವಿರದಿಂದ 30 ಸಾವಿರಕ್ಕೆ ಹೆಚ್ಚಿಸಿ, ನಾಲ್ಕು  ಹಂತದ ಗೌರವ ವೇತನ ನಿಗಧಿಪಡಿಸಿತು.
ಅತಿಥಿ ಉಪನ್ಯಾಸಕರನ್ನು ಯಾವುದೇ ಸರ್ಕಾರ  ಖಾಯಂಗೊಳಿಸುವ ಕಾರ್ಯವನ್ನು ಮಾಡಲಿಲ್ಲ.
ಇತರೇ ರಾಜ್ಯಗಳಲ್ಲಿ ಇರುವಂತೆ  ಕೆಲಸಕ್ಕೆ ತಕ್ಕಂತೆ ಸಂಭಾವನೆ ಸಿಗುತ್ತಿಲ್ಲ. ತಾರತಮ್ಯದ, ವೇತನ ದೊರೆಯುತ್ತಿದೆ. ಅತಿಥಿ ಉಪನ್ಯಾಸಕರಲ್ಲಿ ವಯೋಮಿತಿ ಮೀರುತ್ತಿದೆ.  ವಿವಿಧ ರೀತಿಯ  ಸಮಸ್ಯೆ ಎದಿರಿಸುತ್ತಿದೆ.
ಖಾಯಂ ಮಾಡಲು ಪರಿಶೀಲಿಸಲಿದೆ,  ಚರ್ಚಿಸಲಾಗುವುದು  ಎಂದು ಹೇಳಯತ್ತಲೇ ತುಟಿಗೆ, ತುಪ್ಪ ಸವರುತ್ತಿದೆ.
ಇತರ ರಾಜ್ಯಗಳಂತೆ ಆದರೂ ಗೌರವ ವೇತನ ನೀಡಬೇಕು ಜೊತೆಗೆ ಖಾಯಂಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು.
 ಈಗಾಗಲೇ 2003ರ ಚುನಾವಣಾ ಪ್ರಕಾಳಿಕೆಯಲ್ಲಿ ಕಾಂಗ್ರೆಸ್‌ ಪಕ್ಷ ಅತಿಥಿ ಉಪನ್ಯಾಸಕರ ಖಾಯಂಗೆ ಒಂದು ಸಂಕಲ್ಪ ಮಾಡಿಕೊಂಡಿದೆ. ರಾಜ್ಯದಲ್ಲಿ ಇದು ಗ್ಯಾರಂಟಿಗಳನ್ನು ಹೇಗೆ ಈಡೇರಿಸಲಾಗುತ್ತಿದೆಯೋ ಅದೇ ರೀತಿಯಲ್ಲಿ ತನ್ನ ಪ್ರಣಾಳಿಕೆಯಲ್ಲಿ : ಉಲ್ಲೇಖಿಸಿದ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಸರ್ಕಾರ ಸ್ಪಂದಿಸದೇ ಇದ್ದರೆ ಈ ಮೊದಲಿನಂತೆ ಹೋರಾಟ ನಡೆಸಬೇಕಾಗುತ್ತದೆಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಪದಾಧಿಕಾರಿಗಳು ಮತ್ತು ಉಪನ್ಯಾಸಕರಾದ  ಡಾ.ಟಿ.ದುರುಗಪ್ಪ, ಡಾ.ಹೆಚ್.ಹನುಮೇಶ್, ಸಿದ್ದೇಶ್, ಗೋವಿಂದ ಎಂ, ಎಸ್.ಎಂ.ರಮೇಶ್, ಪಿ.ರುದ್ರಮುನಿ, ಎಂ.ರಫಿ,ರಾಮಚಂದ್ರರಾವ್ ಮೊದಲಾದವರು ಇದ್ದರು.