ಅತಿಥಿ ಉಪನ್ಯಾಸಕರಿಗೆ ಆದ್ಯತೆ ನೀಡಲು ಶಾಸಕರಲ್ಲಿ ಮನವಿ

ಇಂಡಿ:ಜು.3:ಅತಿಥಿ ಶಿಕ್ಷಕರ ಸೇವಾ ಹಿರಿತನವನ್ನು ಪರಿಗಣಿಸಿ ನೇಮಕಾತಿಯಲ್ಲಿ ಮೊದಲ ಆದ್ಯತೆ ನೀಡಬೇಕೆಂದು ಹಾಗೂ ಅತಿಥಿ ಶಿಕ್ಷಕರನ್ನು ಸೇವೆಯಿಂದ ಬಿಡುಗಡೆ ಗೊಳಿಸದೇ ಮುಂದು ವರೆಸಲು ತಾಲೂಕಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ ಶಾಸಕ ಯಶವಂತರಾಯಗೌಡ ಪಾಟೀಲರನ್ನು ಆಗ್ರಹಿಸಿದೆ.

ಶೈಕ್ಷಣಿಕ ವರ್ಷದಲ್ಲಿ 27 ಸಾವಿರ ಪ್ರಾಥಮಿಕ ಮತ್ತು 8 ಸಾವಿರ ಪ್ರೌಢಶಾಲಾ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ.

ಸರಕಾರದ ಆದೇಶದಂತೆ ಮೆರಿಟ್ ಆಧಾರದಲ್ಲಿ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದೆ.ಇದರಿಂದ ಸುಮಾರು ವರ್ಷದಿಂದ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಬಹಳಷ್ಟು ಅತಿಥಿ ಶಿಕ್ಷಕರು ಶಾಲೆಯಿಂದ ಹೊರಗುಳಿಯಬೇಕಾಗಿದೆ.

ಅತಿಥಿ ಶಿಕ್ಷಕರ ಸೇವಾ ಹಿರಿತನವನ್ನು ಪರಿಗಣಿಸಿ ಶಾಲೆಯಿಂದ ಬಿಡುಗಡೆಗೊಳಿಸದೇ ಸೇವೆಯಲ್ಲಿ ಮುಂದುವರೆಸಬೇಕು.

ಹಾಗೂ ಸೇವಾ ಭದ್ರತೆ,ವೇತನ ಏರಿಕೆ,ಕೃಪಾಂಕ,ಖಾಯಮಾತಿ ಗೊಳಿಸುವದು ಇನ್ನಿತರ ಬೇಡಿಕೆ ಸರಕಾರದ ಗಮನಕ್ಕೆ ತಂದು ಅತಿಥಿ ಶಿಕ್ಷಕರ ಸಮಸ್ಯೆಗಳಿಗೆ ಸರಕಾರದಿಂದ ಸೂಕ್ತ ಪರಿಹಾರ ಒದಗಿಸಲು ವಿನಂತಿಸಿದ್ದಾರೆ.

ಅತಿಥಿ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ಹೊಸೂರ,ತಾಲೂಕು ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ,ಎನ್.ಎಸ್.ಕುಂಬಾರ,ಕುಬೇರ ಜಹಾಗೀರದಾರ,ಪ್ರವೀಣ ಮನಮಿ, ಶ್ರೀಮತಿ ಸವಿತಾ ಪೂಜಾರಿ ಮತ್ತಿತರಿದ್ದರು.