ಅತಿಥಿ ಉಪನ್ಯಾಸಕರಿಂದ ಡಿ.ಡಿ.ಪಿ.ಯು.ಗೆ ಮನವಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.04: ಅತಿಥಿ ಉಪನ್ಯಾಸಕರ ಸಂಘಟನೆ ವತಿಯಿಂದ ಅತಿಥಿ ಉಪನ್ಯಾಸಕರ ಬೇಡಿಕೆಗಳಾದ ಅಕ್ಟೋಬರ್ ಮಾಹೆಯ ಕಡಿತವಾದ ಗೌರವ ಧನವನ್ನು ಪೂರ್ಣವಾಗಿ ನೀಡಬೇಕೆಂದು ಹಾಗೂ ಅತಿಥಿ ಉಪನ್ಯಾಸಕರಿಗೆ 10 ಪಿರಿಯಡ್ ಕಾರ್ಯಭಾರ ಮಾಡಲು ಅವಕಾಶ ನೀಡಬೇಕೆಂದು ಮನವಿ ಪತ್ರವನ್ನು ಡಿಡಿಪಿಯುವರಿಗೆ ಸಲ್ಲಿಸಲಾಯಿತು.
ಅಕ್ಟೋಬರ್ ಮಾಹೆಯ ಕಡಿತವಾದ ಗೌರವದನವನ್ನು ಪೂರ್ಣವಾಗಿ ನೀಡುವುದಾಗಿ ಉಪನಿರ್ದೇಶಕರು ಭರವಸೆ ನೀಡುತ್ತಾ ಸ್ವೀಕರಿಸಿದ ಮನವಿಯನ್ನು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ರವಾನಿಸಿರುತ್ತಾರೆ.
ಹಾಗೂ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಬಳ್ಳಾರಿ ಮುನಿಸಿಪಲ್ ಕಾಲೇಜು, ಬಳ್ಳಾರಿ  ಎರಡು ಕಾಲೇಜಿನ ಸಮಸ್ಯೆಯಾದ ವಾರಕ್ಕೆ 10 ಗಂಟೆಗಳ ಕಾರ್ಯಭಾರವನ್ನು ಕುರಿತು ಚರ್ಚಿಸಿದಾಗ ಅವರು ಇದು ನಮಗೆ ಸಂಬಂಧಿಸಿದ ವಿಷಯವಲ್ಲ ಪ್ರಾಂಶುಪಾಲರ ಸಮಸ್ಯೆಯಾಗಿದೆ ಎಂದು ಹೇಳುತ್ತಾರೆ. ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲವೆಂದು ಸಂಘಟನೆ ಖಂಡಿಸುತ್ತಾ, ಮುಂದಿನ ಉನ್ನತ ಹೋರಾಟಕ್ಕೆ ಎಲ್ಲಾ ಉಪನ್ಯಾಸಕರು ಸಜ್ಜಾಗಬೇಕೆಂದು ಸರ್ಕಾರಿ ಪದವಿಪೂರ್ವ ಕಾಲೇಜ್ ಗಳ ಅತಿಥಿ ಉಪನ್ಯಾಸಕರ ಸಂಘಟನೆಯ ಸಂಚಾಲಕರಾದ ಮಲ್ಲಿಕಾರ್ಜುನ್ ಅವರು ಕರೆ ನೀಡಿರುತ್ತಾರೆ.