ಅತಿಥಿ‌ ಉಪನ್ಯಾಸಕರಿಗೆ ಸಂಕ್ರಾಂತಿ ಕೊಡುಗೆ ವೇತನ ಹೆಚ್ಚಳ

ಬೆಂಗಳೂರು , ಜ.14-ಸಂಕ್ರಾತಿ ಹಬ್ಬದಂದು ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಸಮ್ಮತಿ ಸೂಚಿಸಿದ್ದು, ಸಂಬಳದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಅತಿಥಿ ಉಪನ್ಯಾಸಕರ ಬೇಡಿಕೆಗೆ ಸ್ಪಂದಿಸಿದ್ದು, ಈ ಹಿಂದೆ ಪ್ರತಿ ತಿಂಗಳಿಗೆ 11 ಸಾವಿರ ರೂ. ಸಂಬಳ ಪಡೆಯುತ್ತಿದ್ದವರಿಗೆ ₹28 ಸಾವಿರ ಹಾಗೂ 13 ಸಾವಿರ ಇದ್ದವರಿಗೆ 32 ಸಾವಿರ ರೂಪಾಯಿವರೆಗೆ ಹೆಚ್ಚಳ ಮಾಡಲಾಗಿದೆ ಎಂದರು.
ಯುಜಿಸಿ ಅರ್ಹತೆ ಇರುವವರಿಗೆ, 5 ವರ್ಷ ಸೇವೆ ಸಲ್ಲಿಸಿದವರಿಗೆ ₹32 ಸಾವಿರ ನೀಡಲಾಗುತ್ತದೆ ಎಂದು ತಿಳಿಸಿದರು.
ಅತಿಥಿ ಉಪನ್ಯಾಸಕರು ಅನೇಕ ಬೇಡಿಕೆ ಇಟ್ಟಿದ್ದರು. ಅವರ ಬೇಡಿಕೆ ಬಗ್ಗೆ ವರದಿ ನೀಡಲು ಸಿಎಂ ಸಮಿತಿ ನೇಮಕ ಮಾಡಿದ್ದರು. ಕುಮಾರ್ ನಾಯಕ್ ನೇತೃತ್ವದಲ್ಲಿ ಸಮಿತಿ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ವರದಿಯನ್ನು ಸಿಎಂ ಪರಿಶೀಲಿಸಿ ವರದಿಯನ್ನು ಅನುಷ್ಠಾನ ಮಾಡಲು ಬಸವರಾಜ ಬೊಮ್ಯಾಯಿ ಒಪ್ಪಿದ್ದಾರೆ ಎಂದರು.
ಸರ್ಕಾರ ಕೊಟ್ಟ ಭರವಸೆಯಂತೆ ಬೇಡಿಕೆ ಈಡೇರಿಸಲಾಗಿದ್ದು, ಧರಣಿ ಕೈಬಿಡುವಂತೆ ಅತಿಥಿ ಉಪನ್ಯಾಕರಿಗೆ ಸಚಿವರು ಮನವಿ ಮಾಡಿದ್ದಾರೆ.