ಅತಿಕ್ರಮಣ ತೆರವು ಕಾಯಾಚರಣೆ

ಹುಬ್ಬಳ್ಳಿ, ಏ 4: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ ಪಾಲಿಕೆ ವತಿಯಿಂದ ಅತಿಕ್ರಮಿತ ಪ್ರದೇಶ ತೆರವು ಕಾರ್ಯಾಚರಣೆ ಮಾಡಲಾಯಿತು.
ನಗರದ ಕಾರವಾರ ರಸ್ತೆಯ ಪೆÇಲೀಸ್ ವಸತಿ ಗೃಹದಿಂದ ಎಂಟಿಬಿ ಮಿಲ್‍ವರೆಗೆ ಅತಿಕ್ರಮಿತ ಪ್ರದೇಶ ತೆರವು ಕಾರ್ಯಾಚರಣೆಯನ್ನು ಮಾಡಲಾಯಿತು.
ಹಲವಾರು ವರ್ಷಗಳಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಸರ್ಕಾರಿ ಜಾಗೆ ಸೇರಿದಂತೆ ಸಾರ್ವಜನಿಕ ಪ್ರದೇಶಗಳ ಅತಿಕ್ರಮಣವನ್ನು ಸ್ಥಳೀಯರು ಮಾಡಿಕೊಂಡಿದ್ದರು. ಅತಿಕ್ರಮಣ ಪ್ರದೇಶ ತೆರವು ಮಾಡುವಂತೆ ಹಲವಾರು ಸಲ ಹೇಳಲಾಗಿತ್ತು. ಆದರೆ ಈ ಬಗ್ಗೆ ಯಾವುದೇ ರೀತಿಯ ಸ್ಪಂದನೆ ಮಾಡಿರಲಿಲ್ಲ. ಇಂದು ಬೆಳಂಬೆಳಿಗ್ಗೆ ಪೆÇಲೀಸ್ ಭದ್ರತೆಯಲ್ಲಿ ಬಿಸಿ ಮುಟ್ಟಿಸಿದ ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆಯನ್ನು ಮಾಡಿದರು.