ಅತಾಲಟ್ಟಿ ಗ್ರಾಮದ ಶಿವಾನಿ ಗಾರ್ಮೆಂಟ್ಸ್‍ನಲ್ಲಿ ಮತದಾನ ಜಾಗೃತಿ

ವಿಜಯಪುರ, ಮೇ.03: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಅತಾಲಟ್ಟಿ ಗ್ರಾಮದ ಶಿವಾನಿ ಗಾರ್ಮೆಂಟ್ಸ್‍ನಲ್ಲಿ ಮತದಾನ ಜಾಗೃತಿ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಜಿ.ಎ.ವಾಘಮೋರೆ ಅವರು ಮಾತನಾಡಿ, ಮತದಾನವು ಸಂವಿಧಾನ ಪ್ರತಿಯೊಬ್ಬರಿಗೂ ನೀಡಿರುವ ಹಕ್ಕು. ಆದ್ದರಿಂದ ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಆಗ ಮಾತ್ರ ಪ್ರಜಾಪ್ರಭುತ್ವದ ಯಶಸ್ಸು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸುವಂತೆ ಅವರು ಕರೆ ನೀಡಿದರು.

ಜಾಗೃತಿ ಕಾರ್ಯಕ್ರಮದಲ್ಲಿ ಘಟಕದ ಎಲ್ಲ ಕಾರ್ಮಿಕರಿಗೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಈ ಸಂದರ್ಭದಲ್ಲಿ ಶಿವಾನಿ ಗಾರ್ಮೆಂಟ್ಸ್ ಘಟಕದ ಮಾಲೀಕರಾದ ನಿತೀನ್ ಕೊಕಟನೂರ ಘಟಕದ ಮಾನವ ಸಂಪನ್ಮೂಲ ಅಧಿಕಾರಿ ಜೋಶಿ ಸೇರಿದಂತೆ ಘಟಕದ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.