ಅತನೂರು ಗ್ರಾಮದಲ್ಲಿ ಹೂಗಾರ ಮಾದಯ್ಯನವರ ವೃತ್ತ ಅನಾವರಣ

ಅಫಜಲಪುರ:ಎ.24: ತಾಲೂಕಿನ ಅತನೂರು ಗ್ರಾಮದಲ್ಲಿ ತಾಲೂಕಾ ಹೂಗಾರ ಸಮಾಜದ ವತಿಯಿಂದ ಹಾಗೂ ತಾಲೂಕಾ ಶರಣ ಸಾಹಿತ್ಯ ಪರಿಷತ್ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಬಸವದಿ ಶರಣ ಹೂಗಾರ ಮಾದಯ್ಯನವರ ವೃತ್ತ ಅನಾವರಣ ಹಾಗೂ ಜಗಜ್ಯೋತಿ ಬಸವಣ್ಣನವರ ಜಯಂತ್ಯುತ್ಸವ ಮತ್ತು ಅಭಿನಂದನಾ ಸಮಾರಂಭ ಜರುಗಿತು.

ಸಾನಿಧ್ಯವನ್ನು ಅತನೂರಿನ ಅಭಿನವ ಗುರುಬಸವ ಶಿವಾಚಾರ್ಯರು, ಚಿಂಚೋಳಿಯ ಆನಂದಾಶ್ರಮದ ಶರಣಬಸವ ಶರಣರು ಹಾಗೂ ನದಿಸಿನ್ನೂರಿನ ಹೂಗಾರ ಮಾದಯ್ಯನವರ ಗುರುಪೀಠದ ಗುರುರಾಜೇಂದ್ರ ಶಿವಯೋಗಿಗಳು ವಹಿಸಿಕೊಂಡರು.

ಕಾರ್ಯಕ್ರಮದ ನೇತೃತ್ವವನ್ನು ಹೂಗಾರ ಸಮಾಜದ ನಿಕಟಪೂರ್ವ ಅಧ್ಯಕ್ಷ ಮಡಿವಾಳ ಹೂಗಾರ, ತಾಲೂಕಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ಚಾಂದಕವಟೆ ಹಾಗೂ ಮುಖಂಡ ಸಿದ್ಧರಾಮ ಅವಟೆ ವಹಿಸಿಕೊಂಡರು.

ಮುಖ್ಯ ಅತಿಥಿಗಳಾಗಿ ಹೂಗಾರ ಸಮಾಜದ ಕಲಬುರ್ಗಿ ಜಿಲ್ಲಾಧ್ಯಕ್ಷ ಪ್ರಕಾಶ ಫುಲಾರಿ, ಆಳಂದ ತಾಲೂಕಿನ ಹೂಗಾರ ಸಮಾಜದ ಅಧ್ಯಕ್ಷ ಈರಣ್ಣ ಹೂಗಾರ, ದತ್ತು ಹೂಗಾರ, ಬಸವರಾಜ ಹೂಗಾರ, ಶ್ರೀಮಂತ ಹೂಗಾರ, ಅಶೋಕ ಹೂಗಾರ, ಕಲ್ಯಾಣಿ ಹಲಕರ್ಟಿ, ಡಾ. ಸುಭಾಷ ಮೋಹರೀರ, ಮಲ್ಲಿಕಾರ್ಜುನ ಖರ್ಗೆ, ಸಿದ್ದು ಸಣ್ಣೂರ, ಮಡಿವಾಳಪ್ಪ ಗೋಳಸಾರ, ಮಹಾಂತಯ್ಯ ಚೌಕಿಮಠ, ಜಗನ್ನಾಥ ಗೋಳಸಾರ, ರಾಜು ಶೆಟ್ಟಿ, ಕಲ್ಯಾಣಿ ದೇವಣಗಾಂವ, ರವಿರಾಜ ಹಾಸು, ಸುರೇಶ ತೇಲಿ, ರಮೇಶ ಹೂಗಾರ, ರೇವಣಸಿದ್ದ ಹೂಗಾರ ಮುಂತಾದವರು ಆಗಮಿಸಿದ್ದರು.

ಈ ವೇಳೆ ಪ್ರಮುಖರಾದ ಶರಣಪ್ಪ ಅವಟೆ, ಮಹಾಂತೇಶ ಹೂಗಾರ, ಶ್ರೀಶೈಲ ಹೂಗಾರ, ಶರಣು ಹೂಗಾರ ಕೆಸರಟಗಿ, ಶಿವಾನಂದ ಹೂಗಾರ, ಪ್ರಕಾಶ ಪುಲಾರಿ, ಗುಂಡಪ್ಪ ಹೂಗಾರ, ವಿಜಯಕುಮಾರ ಹೂಗಾರ, ಸಿದ್ದು ಹೂಗಾರ, ನಿಂಗಣ್ಣ ಹೂಗಾರ, ಕಲ್ಲು ಹೂಗಾರ, ಗುಂಡಪ್ಪ ಹೂಗಾರ, ಬಸವರಾಜ ಹೂಗಾರ, ಮಲಕಣ್ಣ ಹೂಗಾರ, ಮಲ್ಲು ಹೂಗಾರ ಮುಂತಾದವರಿದ್ದರು.