ಅಣ್ಣ ಬಸವಣ್ಣ

ನೀ ಜಗಕ್ಕೆ ಬರುವಾಗ

ಬ್ರಾಹ್ಮಣನೆಂದು ಬಂದೆ

ವೀರಶೈವ ಧರ್ಮ ಸ್ಥಾಪಕನಾಗಿ ಬೆಳೆದು       ವಿಶ್ವ ಗುರುವೆನ್ನಿಸಿಕೊಂಡೆ

ಲೋಕದ ಅಂಕುಡೊಕುಗಳನ್ನು

ತಿದ್ದಿ . ಮೂಢ ಜನರ ಎಚ್ಚರಿಸಿ

ಜಗಜ್ಯೋತಿಯಾಗಿ ಪರಿಣಮಿಸಿದೆ

ಶರಣ-ಶರಣೆಯರ

ಮನಸ್ಸುಗಳೊ೦ದು ಗೂಡಿಸಿ         

ಹೆಣ್ಣು ಗಂಡೆಂಬ ಭೇದವಿಲ್ಲದೆ 

ಅನುಭವ ಮಂಟಪ ನೀ ಕಟ್ಟಿದೆ

ಲಿಂಗಾಚಾರ . ಶಿವಾಚಾರ

ಸದಾಚಾರ . ಭೃತ್ಯಾಚಾರ

ಗಣಾಚಾರವೆಂಬ ಪಂಚಾಚಾರಗಳ       ಸೂತ್ರದಾರ ನೀನಾದೆ

ಸಾವಿರಾರು ವಚನಗಳು 

ನಿನ್ನಿಂದ ಮೂಡಿ ಬಂದವು

ಅವೆಲ್ಲ ಕಾರ್ಯೋನ್ಮುಖದ

ಅನುಭವ ನುಡಿಮುತ್ತುಗಳಾಗಿ

ಹೊರ ಬಿದ್ದವು

ಮಠ. ಮಠಾಧಿಪತಿಗಳು

ನಿನ್ನ ಧ್ಯಾನದಲ್ಲಿ ಹಗಲಿರುಳು

ಜಪಿಸುತ್ತಾ ನೀ ಹಾಕಿದ ದಾರಿಯಲ್ಲಿ ನಡೆಯುತ್ತಿರುವವು

ನೀ ಮಾಡಿದ ಕಾರ್ಯಗಳು

ಹನ್ನೇರಡನೇ ಶತಮಾನದಲ್ಲಾದರೂ

ಇಪ್ಪತ್ತೊಂದನೇ ಶತಮಾನದಲ್ಲಿ

ನಿನ್ನ ಹೆಸರು ಪ್ರಜ್ವಲಿಸುತ್ತಿರುವುದು

ಅಣ್ಣ ಬಸವಣ್ಣ

ಬಸವ ಜಯಂತಿ ಶುಭಾಶಯಗಳೊಂದಿಗೆ.

– ಎಸ್.ಸಿದ್ದೇಶ್ ಕುರ್ಕಿ