ಅಣ್ಣ ತಮ್ಮನ ಕೊಲೆ;ಜೀವಾವಧಿ ಶಿಕ್ಷೆ,ದಂಡ

ಕಲಬುರಗಿ,ಜು 27: ಕಮಲಾಪುರ ತಾಲೂಕಿನ ತಡಕಲ್ ಗ್ರಾಮದಲ್ಲಿ ಸಹೋದರರಿಬ್ಬರ ಕೊಲೆ ಮಾಡಿದ ಆರೋಪ ಸಾಬೀತಾದ್ದರಿಂದ ಇಲ್ಲಿನ 3 ನೇ ಹೆಚ್ಚುವರಿ ಹಾಗೂ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ ದಂಡ ವಿಧಿಸಿದೆ.
ತಡಕಲ್ ಗ್ರಾಮದ ನಿವಾಸಿ ಚಂದ್ರಶೇಖರ ಚಂದ್ರಪ್ಪ ಕಮಲಾಪುರ ವಾಲೀಕಾರ ( 27) ಶಿಕ್ಷೆಗೆ ಒಳಗಾದವ.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ಆರೋಪಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
2021 ರ ಜನವರಿ 15 ರಂದು ತಡಕಲ್ ಗ್ರಾಮದಲ್ಲಿ ನಿಲೇಶ್ ಮೋರೆ ಹಾಗೂ ಆತನ ಅಣ್ಣ ರಾಜು ಮೋರೆ ಎಂಬ ಸಹೋದರರನ್ನು ತಲವಾರ್ ನಿಂದ ಹೊಡೆದು ಚಂದ್ರಶೇಖರ ಕೊಲೆ ಮಾಡಿದ್ದ.ಅಕ್ರಮ ಸಂಬಂಧದ ಶಂಕೆಯಡಿ ,ನಿಲೇಶ್ ಮೋರೆ ಜತೆ ಜಗಳ ತೆಗೆದಿದ್ದ.ಈ ವೇಳೆ ಮಧ್ಯಪ್ರವೇಶಿಸಿದ ರಾಜು ಮೋರೆ ಸೇರಿ ಇಬ್ಬರನ್ನು ಕೊಲೆ ಮಾಡಿದ್ದ.ಗ್ರಾಮೀಣ ಠಾಣೆಯ ಪೊಲೀಸ್ ಇನ್‍ಸ್ಪೆಕ್ಟರ್ ಶಂಕರಗೌಡ ಪಾಟೀಲ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 3 ನೇ ಅಪರ ಸರಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ಅವರು ವಾದ ಮಂಡಿಸಿದ್ದರು.