ಅಣ್ಣಿಗೇರಿ ಪುರಸಭೆ: ಬಜೆಟ್ ಪೂರ್ವಭಾವಿ ಸಭೆ

ಅಣ್ಣಿಗೇರಿ,ಜ10 : ಪುರಸಭೆ ಕಾರ್ಯಾಲಯದಲ್ಲಿ 2022-23 ರ ಬಜೆಟ್ ಪೂರ್ವಭಾವಿ ಸಭೆಯ ಕರೆಯಲಾಗಿತ್ತು ಸಭೆಯಲ್ಲಿ.ನಗರದ ವಾಣಿಜ್ಯ ಮಳಿಗೆಗಳು ಹಲವಾರು ವರ್ಷಗಳಿಂದ ಬಾಡಿಗೆ ತುಂಬದವರಿಗೆ ಬಿಡಿಸಿ ಬೇರೆ ಸಾರ್ವಜನಿಕರಿಗೆ ಗುತ್ತಿಗೆ ಆಧಾರದ ಮೇಲೆ ನೀಡಬೇಕು ಅಂದರೆ ಪುರಸಭೆಗೆ ಹೆಚ್ಚಿನ ಆದಾಯ ವಾಗುತ್ತದೆ ಎಂದು ಸಭೆಯಲ್ಲಿದ್ದ ಎಲ್ಲಾ ಜನಪ್ರತಿನಿಧಿಗಳು ಪ್ರಮುಖವಾಗಿ ಚರ್ಚಿಸಿದರು. ನಗರದ ಎಲ್ಲ ಸಾರ್ವಜನಿಕರಿಗೆ ಯಾವುದೇ ಆರ್ಥಿಕ ಹೊರೆಯಾಗದಂತೆ ಬಜೆಟ್ ಮಂಡಿಸಲು ಎಲ್ಲ ಸದಸ್ಯರು ಸೂಚಿಸಿದರು ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸದಸ್ಯರಾದ ಎ.ಪಿ. ಗುರುಕಾರ್ ಹೆಚ್ಚು ಹೆಚ್ಚು ಅನುದಾನವನ್ನ ಸರ್ಕಾರದಿಂದ ಪಡೆದುಕೊಳ್ಳುವುದಕ್ಕಾಗಿ ನಿಯೋಗವನ್ನು ರಚನೆ ಮಾಡಿ ಮತ್ತು ಬೇರೆ ರಾಜ್ಯ ಬೇರೆ ಜಿಲ್ಲೆಗಳ ಅಭಿವೃದ್ಧಿ ಕಾರ್ಯಗಳ ಅಧ್ಯಯನ ಪ್ರವಾಸಕ್ಕಾಗಿ ಪುರಸಭೆ ಆಡಳಿತ ಮಂಡಳಿ ಸರ್ವ ಸದಸ್ಯರ ಒಳಗೊಂಡು ಸಭೆಯಲ್ಲಿದ್ದ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳನ್ನು ಒತ್ತಾಯಿಸಿದರು.ಪೂರ್ವಭಾವಿ ಸಭೆಯಲ್ಲಿ ನಾಮ ನಿರ್ದೇಶತ ಸದಸ್ಯರಾದ ಸೋಮಶೇಖರ ಹಿರೇಮಠ ಮಾತನಾಡಿ ಅವರು ಮುಂಬರುವ ಮಳೆಗಾಲದ ಹೊತ್ತಿಗೆ ಹಳ್ಳಿಕೇರಿ ದಾರಿಯಿಂದ ಬರುವಂತಹ ನೀರು ಶಾಶ್ವತವಾಗಿ ನಗರಕ್ಕೆ ಬರದ ಹಾಗೆ ನೋಡಿಕೊಳ್ಳೋಣ. ಮಳೆ ಬಂದಾಗ ಮಾತ್ರ ಆ ವಿಷಯವನ್ನು ಚರ್ಚಿಸುವುದಕ್ಕಿಂತ ಆ ನೀರಿನಿಂದ ಸಂತ್ರಸ್ಥರಾಗುವ ಕುಟುಂಬಗಳಿಗೆ ನ್ಯಾಯ ದೊರಕಿಸಿ ಕೊಡುವುದು ಬಹಳ್ಳ ಉತ್ತಮ
ಜನವರಿ 13ರಂದು ಅಣ್ಣಿಗೇರಿ ನಗರಕ್ಕೆ ಬಸಾಪುರ ನೂತನ ಕೆರೆಯಿಂದ ಬರುವಂತಹ ನೀರನ್ನು ಸ್ವಾಗತಿಸಲಿಕ್ಕೆ ನಗರದ ಪುರಸಭೆ ಕಾರ್ಯಾಲಯದ ವತಿಯಿಂದ ಸಾರ್ವಜನಿಕರಿಗೆ ಮಾಹಿತಿ ನೀಡಲು ಧ್ವನಿವರ್ಧಕದ ಮೂಲಕ ಸೂಚಿಸಲು ವಿನಂತಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ನೆಡವಣಿ, ಅಧ್ಯಕ್ಷರಾದ ಶ್ರೀಮತಿ ಗಂಗಾ ರಮೇಶ್ ಕರಟ್ಟಿನವರ, ಶ್ರೀಮತಿ ವಿಜಯಲಕ್ಷ್ಮಿ ಜಕರಡ್ಡಿ, ಬಾಬಾಜಾನ್ ಮುಲ್ಲಣ್ಣವರ, ಈಶ್ವರ್ ಕಾಳಪ್ಪನವರ, ನಾಗಪ್ಪ ದಳವಾಯಿ, ಶಿವಾನಂದ ಬೆಳಹಾರ, ಸರ್ವ ಸದಸ್ಯರು, ನಾಮ ನಿರ್ದೇಶತ ಸದಸ್ಯರು, ವರ್ತಕರು, ಸಂಘ -ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪಟ್ಟಣದ ನಾಗರಿಕರು ಸಭೆಯಲ್ಲಿ ಭಾಗವಹಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.