ಅಣ್ಣಿಗೇರಿಯಲ್ಲಿ ಭಾರಿ ಮಳೆ

ಅಣ್ಣಿಗೇರಿ,ಮೇ13: ನಗರದಲ್ಲಿ ನಿನ್ನೆ ಧಾರಾಕಾರ ಮಳೆ ಸುರಿದಿದ್ದಿ ಬಿರುಗಾಳಿ ಸಮೇತ ಮಳೆಗೆ ಮರ ಧರೆಗೆ ಉರುಳಿದಿದೆ. ಮುಂಡರಗಿಯವರ ಓಣಿಯಲ್ಲಿ ಮನೆಯ ಮೇಲ್ಛಾವಣೆ ಬಿರುಗಾಳಿಗೆ ಹಾರಿ ಹೋಗಿದ್ದು ಹಲವಾರು ವಾಹನಗಳಿಗೆ ಹಾನಿಉಂಟಾಗಿದೆ. ಬಿಸಿಲಿನ ತಾಪಕ್ಕೆ ಬೇಸತ್ತಿದ್ದ ಜನರಿಗೆ ವರುಣ ತಂಪೆರಚಿದ್ದಾನೆ. ಗಾಳಿ ಸಹಿತ ಸಿಡಿಲು ಗುಡುಗು ಮಳೆ ಬಿದ್ದಿದೆ.
ಸಂಜೆ ಐದು ಗಂಟೆಗೆ ಶುರುವಾದ ಮಳೆ ಅರ್ಧ ಗಂಟೆಗೂ ಅಧಿಕ ಕಾಲ ಸುರಿಯಿತು.
ಚರಂಡಿಗಳನ್ನು ಸಮಯಕ್ಕೆ ಸರಿಯಾಗಿ ಸ್ವಚಗೊಳಿಸದೇ ಇದ್ದಕಾರಣ ರಸ್ತೆ ಮೇಲೆ ನೀರು ನಿಂತ ಪರಿಣಾಮ ಮನೆಗಳಿಗೆ ನೀರು ನುಗ್ಗಿ ತೊಂದರೆ ಅನುಭವಿಸಬೇಕಾಯಿತು ಎಂದು ಸಾರ್ವಜನಿಕರು ದೂರಿದರು.