ಅಣ್ಣಾಮಲೈ, ಪಿಟಿಆರ್ ಟ್ವಿಟ್ ವಾರ್

ತಮಿಳುನಾಡು,ಏ.೨೩- ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಕುಟುಂಬದ ಸದಸ್ಯರ ಆಸ್ತಿಗಳ ಬಗ್ಗೆ ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗ ರಾಜನ್ ಅವರು ಕೆಲ ರಹಸ್ಯ ಬಿಚ್ಚಿಟ್ಟಿದ್ದಾರೆ ಎಂದು ಅಣ್ಣಾಮಲೈ ಟ್ವಿಟ್ ಮಾಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಿಟಿಆರ್, ಇದೊಂದು ದುರುದ್ದೇಶಪೂರಿತ ಕೆಲಸವಾಗಿದ್ದು, ಆಡಿಯೊವನ್ನು ಯಾರೋ ಪ್ರಶ್ನಿಸಿದ್ದಾರೆ ಎಂದಿದ್ದಾರೆ.ಇತ್ತೀಚಿಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಒಂದು ಅಡಿಯೊ ಕ್ಲಿಪ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು. ಎಂ.ಕೆ. ಸ್ಟಾಲಿನ್ ಅವರ ಪುತ್ರ ಉದಯನಿಧಿ ಮತ್ತು ಅಳಿಯ ರೇಶನ್ ಅವರ ಆಸ್ತಿಗಳ ಬಗ್ಗೆ ಪಿಟಿಆರ್ ಕೆಲವು ರಹಸ್ಯ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ ಎಂದು ಹೇಳಿದ್ದರು.
ಈ ಆಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.