ಚಾಮರಾಜನಗರ, ಏ.04:- ತಮಿಳುನಾಡು ರಾಜ್ಯದ ಬಿಜೆಪಿ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯದ ಉಸ್ತುವಾರಿ ಅಣ್ಣಾಮಲೈ ಗಾಂಧಿ ಕುಟುಂಬದ ಇತಿಹಾಸ ಅರಿತು ಮಾತನಾಡಲಿ ಎಂದು ಜಿಲಾ ್ಲಕಾಂಗ್ರೆಸ್ ವಕ್ತಾರ ಹಾಗೂ ಜಿ.ಪಂ.ಮಾಜಿ ಸದಸ್ಯ ಕೆರೆಹಳ್ಳಿನವೀನ್ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಹನೂರಿನಲ್ಲಿ ನಡದ ಬಿಜೆಪಿ ಓಬಿಸಿ ಮೋರ್ಚಾದ ಸಮಾವೇಶದಲ್ಲಿ ಅಣ್ಣಾಮಲೈ ಮೋದಿ ಹಾಗೂ ರಾಜ್ಯ ಮುಖಂಡರನ್ನು ಒಲೈಸಲು ಕಾಂಗ್ರೆಸ್, ಗಾಂಧಿ ಕುಟುಂಬದ ಬಗ್ಗೆ ಲಘುವಾಗಿ ಮಾಡನಾಡಿದ್ದಾರೆ.
ಸ್ವಾತಂತ್ರ್ಯ ನಂತರ ಹಾಗೂ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ನೆಹರು ಕುಟುಂಬದ ಸೇವೆ ಅನನ್ಯವಾದದ್ದು, ಬ್ರಿಟಿಷರು ಎಲ್ಲ ಸಂಪತ್ತು ದೋಚಿ ದೇಶವನ್ನು ಬಡತನಕ್ಕೆ ದೂಡಿ ಹೋಗಿದ್ದರು. 60 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಪ್ರಧಾನಿಯಾಗಿದ್ದ ಜವಾಹಲ್ ನೆಹರು, ಇಂದಿರಾಗಾಂದಿ, ರಾಜೀವ್ ಗಾಂಧಿದೇಶದ ಆರ್ಥಿಕತೆಯನ್ನು ಸುಧಾರಣೆ ಮಾಡುವ ಬಲಿಷ್ಢ ಭಾರತ ನಿರ್ಮಾಣ ಮಾಡಿದರು ಎಂದರು.
ಇಂದು ಅಣ್ಣಾಮಲೈ ಐಪಿಎಸ್ ಮಾಡಿ ಸೂಟ್ ಬೂಟ್ ಹಾಕಿಕೊಳ್ಳುವುದಕ್ಕೆ ಅಂದು ರಾಜೀವ್ ಗಾಂಧಿ ತಂದ ಯೋಜನೆಗಳು ಕಾರಣ, ಐಎಎಸ್, ಐಪಿಎಸ್ ಕೋಚೆಂಗ್ ಸೆಂಟರ್‍ಉಚಿತ ಬಡವರಿಗೆ ಕೊಡಿಸಿದ ಪರಿಣಾಮ ನಿಮ್ಮಂತ ಅನೇಕರು ಅಧಿಕಾರಿಗಳಾಗಳು ಸಾಧ್ಯವಾಯಿತು. ಈಗ ರಾಜೀನಾಮೆ ನೀಡಿ ತಮಿಳುನಾಡಿನಲ್ಲಿ ಕಮಲ ಅರಳಿಸಲು ಮುಂದಾಗಿರುವ ನೀವು ಜಿಲ್ಲೆಯ ನಾಲ್ಕು ಕ್ಷೇತ್ರಗಳ ಬಿಜೆಪಿ ಗೆಲ್ಲಿಸಿ ಎನ್ನುವ ಬದಲು ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರತನ್ನಿ ಸವಾಲು ಹಾಕಿದರು.
ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಕೊಡುಗೆ : ಹಿಂದುಳಿದ ವರ್ಗಗಲಕುಗೆ ಬೇಲೂರುಘೋಷಣೆ ಮೂಲಕ, ಪಂಚಾಯತ್ ರಾಜ್ ವಿಕೇಂದ್ರೀಕರಣ ಮೂಲಕ ಆ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಟ್ಟಿದೆ. ಮೀಸಲಾತಿ ನೀಡುವಲ್ಲಿ ಪ್ರಾಮುಖ ಪಾತ್ರ ವಹಿಸಿದೆ. ಹೀಗಾಗಿ ಕರ್ನಾಟಕ ಬಂದು ಓಬಿಸಿ ಕಾಂಗ್ರೆಸ್ ಎಂದು ಹೇಳುವ ನೃತಿಕತೆ ಇಲ್ಲ ಎಂದರು.
ಪ್ರಧಾನಿ ಭೇಟಿಯಿಂದ ನೀತಿ ಸಂಹಿತಿಉಲ್ಲಂಘನೆ : ಪ್ರಧಾನಿ ನರೇಂದ್ರಮೋದಿ ಅವರು ಏ. 9 ರಂದು ಬಂಡೀಪುರಕ್ಕೆ ಭೇಟಿ ನೀಡುತ್ತಿರುವುದು ಚುನಾವಣಾ ನೀತಿ ಸಂಹಿತಿ ಸ್ಪಷ್ಡಉಲ್ಲಂಘನೆಯಾಗುತ್ತಿದೆ ಎಂದು ದೂರಿದರು.
1973 ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ಬಂಡೀಪುರ ಅರಣ್ಯಪ್ರದೇಶವನ್ನು ಹುಲಿ ಸಂರಕ್ಷತ ಪ್ರದೇಶವೆಂದು ಘೋಷಿಸಿ ಏ.1 ಕ್ಕೆ 50 ವರ್ಷತುಂಬಿದೆ. ಈ ಸಂಭ್ರಮವನ್ನು ವರ್ಷಪೂರ್ತಿಅಚರಣೆ ಮಾಡಬಹುದಾಗಿದೆಆದರೆ ಪ್ರಧಾನಿ ನರೇಂದ್ರಮೋದಿ ಅವರು ಕರ್ನಾಟಕದಲ್ಲಿ ನೀತಿ ಸಂಹಿತೆ ಜಾರಿಯಾಲ್ಲಿದ್ದರೂ ಕೂಡ ಈ ನೆಪದಲ್ಲಿರಾಜ್ಯ ಬರುತ್ತಿರುವುದಕ್ಕೆ ನಮ್ಮ ವಿರೋಧಇದೆ.
ಕರ್ನಾಟಕ ಯಾವುದೇ ನಾಯಕರು ಅವರನ್ನು ಭೇಟಿಯಾಗುವುದಿಲ್ಲವೇ? ಇವೆಲ್ಲವೂ ಸಹ ಚುನಾವಣೆ ಗಿಮಿಕ್ ಆಗಿದೆ. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣೆಸಬೇಕು ಈಬಗ್ಗೆ ರಾಜ್ಯ ಮುಖಂಡರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಸಿದ್ದತೆ ನಡೆಸಿದ್ದಾರೆ ಎಂದರು.
ಡಬಲ್ ಇಂಜಿನ್ ಬಿಜೆಪಿ ಟ್ರಬಲ್ ಇಂಜಿನ್ ಸರ್ಕಾರ: ಕೇಂದ್ರ ಮತ್ತುರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯನ್ನು ಡಬಲ್ ಇಂಜನ್ ಸರ್ಕಾರಎನ್ನುವ ಬದಲು ಇಂದೊಂದು ಟ್ರಬಲ್ ಇಂಜನ್ ಸರ್ಕಾರಎಂದುಜನರು ಹೇಳುತ್ತಿದ್ದಾರೆ. ಸಾಮಾನ್ಯ ಜನರಿಗೆ ಹೊರೆಯಾಗಿರುವ ಈ ಸರ್ಕಾರಕಿತ್ತು ಹೋಗೆಯಲು ಜನತೆ ಕಾತುರದಿಂದ ಮೇ.10 ರ ದಿನ ನೋಡುತ್ತಿದ್ದಾರೆ ಜಿಲ್ಲೆಯ ನಾಲ್ಕು ಕ್ಷೇತ್ರಗಳು ಸೇರಿ ರಾಜ್ಯದಲ್ಲಿ 150 ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆಎಂದು ಕೆರೆಹಳ್ಳಿನವೀನ್ ವಿಶ್ವಾಸ ವ್ಯಕ್ತಪಡುಸಿದರು.
ಪತ್ರಿಕಾಗೋಷ್ಟಿಯಲ್ಲಿ ತಾ.ಪಂ.ಮಾಜಿ ಸದಸ್ಯಎಸ್. ರಾಜು, ಕಾಂಗ್ರೆಸ್ ಓಬಿಸಿ ವಿಭಾಗದ ನಂಜುಂಡೇಗೌಡ, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ವಕೀಲ ಅರುಣ್ ಕುಮಾರ್, ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ನಾಯಕ, ಮುಖಂಡ ಸಿ.ಎನ್.ಮಹೇಶ್ ಹಾಜರಿದ್ದರು