
ಶಹಾಪುರ :ಫೆ.22:ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಜರುಗಲು ಇವಿಎಂ ಮತಯಂತ್ರಗಳ ಪಾರದರ್ಶಕತೆ ಕುರಿತು ಸರ್ವರು ತಿಳಿದುಕೊಳ್ಳಲು ಚುನಾವಣೆ ಆಯೋಗದ ನಿರ್ದೇಶನದನ್ವಯ ನಗರ ಸಭೆ 47ಸೆಕ್ಟರ್‍ಗಳಲ್ಲಿ ಅಧಿಕಾರಿ ಮತ್ತು ಸಹಾಯಕ ತಂಡದೊಂದಿಗೆ ವಿವಿಧ ಬಡಾವಣೆಗಳಲ್ಲಿ ಮತದಾನ ಜಾಗೃತಿ ಕಾರ್ಯ ಮಾಡುತ್ತಿದೆ ಎಂದು ತಾಂತ್ರಿಕ ಅಧಿಕಾರಿ ನಾನಾಸಾಹೇಬ ತಿಳಿಸಿದರು.
ನಗರದ ಹಳಪೇಟೆಯ ಸಂಖ್ಯೆ 19ರಲ್ಲಿ ಇವಿಎಂ ಬಳಕೆಯ ಅಣುಕು ಪ್ರದರ್ಶನ ನಡೆಸಿದ ಸಂದರ್ಭದಲ್ಲಿ ಬಡಾವಣೆಯವರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಳಗಡೆ ಇವಿಎಂ ಮಷಿನ್ ಬಗ್ಗೆ ಇರುವ ತಪ್ಪು ಅಭಿಪ್ರಾಯ ಹೋಗಲಾಡಿಸುವುದು ಮತ್ತು ನಾವು ಹಾಕಿದ ಮತ ಖಚಿತ ಪಡಿಸಿಕೊಳ್ಳುವ ಅವಕಾಶವಿದ್ದು, ಸರ್ವರೂ ಮಾಹಿತಿ ಪಡೆದಾಗ ಇದರ ಸಾರ್ಥಕತೆಯಾಗುತ್ತದೆ ಎಂದರು, ಇದೇ ಸಂದರ್ಭದಲ್ಲಿ ಬಡಾವಣೆಯವರು ಅಣುಕು ಮತದಾನದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ನಗರಸಭೆಯ ಸಂತೋಷ, ಖಮರುದ್ದೀನ್, ವೀರೇಶ, ನ.ಯೋ.ಪ್ರಾ ಸದಸ್ಯ ಮುರಳಿಧರ ಸುಂಬಡ, ಸಕ್ರಪ್ಪ ಹೂಗಾರ ಸೇರಿದಂತೆ ಇತರರು ಇದ್ದರು.