ಅಣವಾರ: ಕುರಿಗಾಯಿ ಮೇಲೆ ಕಾಡುಹಂದಿ ದಾಳಿ

ಚಿಂಚೋಳಿ,ಜು.7- ತಾಲೂಕಿನ ಅಣವಾರ ಗ್ರಾಮದ ದೇವಿಂದ್ರಪ್ಪ ತಂದೆ ಸಿದ್ದಪ್ಪ ಉಡಮನಳ್ಳಿ (50) ಎಂಬ ಕುರಿಗಾಯಿ ವ್ಯಕ್ತಿ ಕಳೆದ ಜು.03 ರಂದು ಸೋಮವಾರ ತಮ್ಮ ಕುರಿ-ಆಡುಗಳನ್ನು ಮೇಯಿಸಲು ಹೋದಾಗ ಅಲ್ಲಿ ಕಾಡು ಹಂದಿ ದಾಳಿ ಮಾಡಿದ ಪರಿಣಾಮ ತೀವ್ರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾನೆ.
ಕಾಡು ಹಂದಿ ವ್ಯಕ್ತಿಯ ಎಡಗಾಲಿನ ತೊಡೆಯ ಮಾಂಸವನ್ನು ಹರಿದು ಹಾಕಿದ್ದು, ಗಾಯಗೊಂಡ ಕುರಿಗಾಯಿ ತೀವ್ರ ಅಸ್ವಸ್ಥ ಗೊಂಡು ಬಳಲುತ್ತಿವುದನ್ನು ಗಮನಿಸಿದ ಅಲ್ಲಿನ ಜನರು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.