ಅಣವಾರ: ಏ.2ರಿಂದ ಜಾತ್ರಾ ಮಹೋತ್ಸವ

ಚಿಂಚೋಳಿ,ಮಾ.30- ತಾಲೂಕಿನ ಅಣವಾರ ಗ್ರಾಮದಲ್ಲಿ ಇದೇ ಏಪ್ರಿಲ್ 2 ರಿಂದ 6 ರ ವರೆಗೂ ಇಲ್ಲಿನ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ ಜರುಗಲಿದೆ.
ಏಪ್ರಿಲ್ 2ರಿಂದ 5 ದಿವಸಗಳ ಕಾಲ ಸಾಯಂಕಾಲದಲ್ಲಿ ಶ್ರೀ ವೀರಭದ್ರೇಶ್ವರ ಹಾಗೂ ಮಾರುತೇಶ್ವರ ವಿಗ್ರಹ ಪಲ್ಲಕ್ಕಿ ಉತ್ಸವ ಹಾಗೂ ಇದೇ ಐದು ದಿವಸಗಳ ಕಾಲ ಮುಂಜಾನೆ ಮತ್ತು ಸಾಯಂಕಾಲ ರುದ್ರಾಭಿಷೇಕ ಪೂಜೆ ನಡೆಯದಲಿದೆ.
ಏ. 5ರಂದು ಅನ್ನದಾಸೋಹ ಕಾರ್ಯಕ್ರಮ { ಖಾಂಢ } ಹಾಗೂ ಸಾಯಂಕಾಲ ಅಗ್ನಿ ಗುಂಡ ಪೂಜೆ ಹಾಗೂ ಗ್ರಾಮದ ಸಕಲ ಭಕ್ತಾದಿಗಳಿಂದ ನೈವೇದ್ಯ ಏ.6 ರಂದು ಬೆಳಗ್ಗೆ 2 ಗಂಟೆಯಿಂದ 4 ಗಂಟೆವರೆಗೂ ಶ್ರೀ ವಿಘ್ನೇಶ್ವರ ಪೂಜೆ ಹಾಗೂ ಸ್ವಸ್ತಿ ಪುಣ್ಯಹವಾಚನ , ನಾಂದಿ ಸಮಾರಾಧನೆ, ಹಾಗೂ ವಿಶೇಷ ಅಭಿಷೇಕ , ಪಂಚಾಮೃತ ಅಭಿಷೇಕ , ಮಹಾ ರುದ್ರ ಅಭಿಷೇಕ ಪೂಜೆ ನಡೆಯಲಿದೆ.
ಅಂದು ಬೆಳಗ್ಗೆ 5:00ಗೆ ಪೂರವಂತರ ದೇವಸ್ಥಾನಕ್ಕೆ ಪ್ರವೇಶ ಹಾಗೂ ಪಲ್ಲಕ್ಕಿ ಉತ್ಸವ ಮುಂಜಾನೆ 11 ಗಂಟೆಗೆ ಅಗ್ಗಿ ತುಳೆಯುವುದು, ಹಾಗೂ ಸಂಜೆ 6:30 ಭವ್ಯ ರಥೋತ್ಸವ ಜರುಗಲಿದೆ.
ಏಪ್ರಿಲ್ 7ರಂದು ಬೆಳಗ್ಗೆ 10 ಗಂಟೆಗೆ ಜಂಗ್ಗಿ ಕುಸ್ತಿ ಕಾರ್ಯಕ್ರಮ, ಹಾಗೂ ಅನ್ನದಾಸೋಹ ಕಾರ್ಯಕ್ರಮ ಇರುತ್ತೆ ಗ್ರಾಮದ ಸುತ್ತಮುತ್ತಲಿನ ಎಲ್ಲಾ ಗ್ರಾಮ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ವೀರಭದ್ರೇಶ್ವರ ಹಾಗೂ ಮಾರುತೇಶ್ವರ ದೇವರ ದರ್ಶನ ಪಡೆದು ಪುನೀತರಾಗಬೇಕೆಂದು ಶ್ರೀ ಮಾರುತೇಶ್ವರ ಮಂದಿರ ಪ್ರಧಾನ ಅರ್ಚಕ ಸಿದ್ದಯ್ಯ ಸ್ವಾಮಿ ಅಣವಾರ ಹಾಗೂ ಶ್ರೀ ಮಾರುತೇಶ್ವರ ಮಂದಿರ ಟ್ರಸ್ಟ್ ಪ್ರಕಟಣೆಯಲ್ಲಿ ಕೋರಿದೆ.