ಅಣಬೆ ಕುರ್ಮಾ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು
2 ಚಮಚ ಎಣ್ಣೆ
ಅರ್ಧ ಚಮಚ ಜೀರಿಗೆ
೨ ಈರುಳ್ಳಿ
೩ ಟೊಮೆಟೊ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
1 ಚಮಚ ಖಾರದ ಪುಡಿ
1 ಚಮಚ ಗರಂ ಮಸಾಲ
ಅರ್ಧ ಚಮಚ ಮೀಟ್ ಮಸಾಲ
ಅರಿಶಿಣ ಪುಡಿ ಅರ್ಧ ಚಮಚ
ಅಣಬೆ 100 ಗ್ರಾಂ
ಬಟಾಣಿ 1 ಕಪ್
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
ಪ್ಯಾನ್‌ಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ. ಜೀರಿಗೆ ಚಟ್‌ಪಟ್ ಶಬ್ದ ಮಾಡುವಾಗ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ. ಅದರ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ. ಈಗ ಟೊಮೆಟೊ ಹಾಕಿ ಅದರ ಮೇಲೆ ಉಪ್ಪನ್ನು ಉದುರಿಸಿ. ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿ. ಅದರ ಮೇಲೆ ಖಾರದ ಪುಡಿ, ಗರಂ ಮಸಾಲ ಅಥವಾ ಮೀಟ್ ಮಸಾಲ ಹಾಕಿ. ಮಿಶ್ರಣದಿಂದ ಎಣ್ಣೆ ಬಿಟ್ಟು ಮೇಲ್ಭಾಗದಲ್ಲಿ ತೇಲುವಷ್ಟು ಹೊತ್ತು ಸೌಟ್‌ನಿಂದ ಆಡಿಸುತ್ತಾ ಇರಿ. ಈಗ ಬಟಾಣಿ, ಅಣಬೆ, ಅರಿಶಿಣ ಹಾಕಿ. ಈಗ ಸಾಧಾರಣ ಉರಿಯಲ್ಲಿ 3-4 ನಿಮಿಷ ಬೇಯಿಸಿ. ನಂತರ ಸ್ವಲ್ಪ ನೀರು ಸೇರಿಸಿ, ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ. ಸೌಟ್‌ನಿಂದ ತಳ ಹಿಡಿಯದಂತೆ ಆಗಾಗ ಆಡಿಸುತ್ತಾ ಇರಿ. ಈಗ ಮಿಶ್ರಣ ಬೆಂದ ಮೇಲೆ ಪಾತ್ರೆಯ ಮುಚ್ಚಳ ತೆಗೆದು ಮಿಶ್ರಣ ಸ್ವಲ್ಪ ಗಟ್ಟಿ ಗ್ರೇವಿಯಾಗುವವರೆಗೆ ಬೇಯಿಸಿ. ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದ ಬಟಾಣಿ-ಅಣಬೆಯ ಗ್ರೇವಿ ರೆಡಿ.