ಅಣಬೆಯ ಉಪಯೋಗ

ಅಣಬೆಯಲ್ಲಿ ಸೋಡಿಯಂ ಹಾಗೂ ಕೊಬ್ಬು ಅತೀ ಕಡಿಮೆ ಪ್ರಮಾಣದಲ್ಲಿದ್ದು, ಶೇಕಡಾ ೮-೧೦ ರಷ್ಟು ನಾರಿನಂಶ ಹೊಂದಿದೆ. ಹೀಗಾಗಿ ದೇಹದ ತೂಕ ಇಳಿಸಲು ಪ್ರಯತ್ನಿಸುತ್ತಿರುವವರಿಗೆ ಇದು ಉತ್ತಮ ಆಹಾರ.
ಇತ್ತೀಚಿನ ಸಂಶೋಧನೆಗಳ ಪ್ರಕಾರ ಖಿನ್ನತೆಯಿಂದ ಬಳಲುವವರಿಗೆ ಅದರಿಂದ ಹೊರಬರಲು ಸಣ್ಣ ಸಣ್ಣ ಅಣಬೆಗಳು ದಿವ್ಯೌಷಧವಾಗಿವೆ. ಇದು ಮೆದುಳಿನ ನರಗಳನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ ಎಂದು ವಿಜ್ಙಾನಿಗಳು ತಿಳಿಸಿದ್ದಾರೆ.
ಅಣಬೆಯಲ್ಲಿರುವ ವಿಟಮಿನ್ ಡಿ’ಯಿಂದ ಎಲುಬಿನ ಆರೋಗ್ಯ ಉತ್ತಮವಾಗುತ್ತದೆ. ದೇಹಕ್ಕೆ ಒಂದು ದಿನಕ್ಕೆ ಬೇಕಾಗಿರುವ ಶೇ.೨೦ರಷ್ಟು ವಿಟಮಿನ್ಡಿ’ ಅಣಬೆಯಲ್ಲಿದೆ.
ಇದರಲ್ಲಿರುವ ಸೆಲೆನಿಯನ್ ಅಂಶ ತಲೆಕೂದಲು, ಉಗುರಿನ ಆರೋಗ್ಯಕ್ಕೆ ಬಹಳ ಒಳ್ಳೆಯದು.
ದೇಹದಲ್ಲಿ ಅತ್ಯಧಿಕ ಉತ್ಪಾದನೆಗೊಳ್ಳುವ ಈಸ್ಟ್ರೋಜೆನ್ ಹಾರ್ಮೋನುಗಳನ್ನು ಇದು ಕಡಿಮೆಗೊಳಿಸುತ್ತದೆ. ಹೀಗಾಗಿ ಇದು ಸ್ತನ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯನ್ನು ಆದಷ್ಟು ಕಡಿಮೆಗೊಳಿಸುತ್ತದೆ.
ಅಣಬೆಯಲ್ಲಿ ಯೋಗ್ಯ ಪ್ರಮಾಣದಲ್ಲಿ ಕ್ಯಾಲ್ಸಿಯಂ ಕೂಡ ಇದ್ದು, ಮೂಳೆಗಳ ಬೆಳವಣಿಗೆಗೂ ಸಹಕಾರಿ. ಇದರಲ್ಲಿನ ಕಬ್ಬಿಣದ ಅಂಶವು ಶರೀರದ ರಕ್ತಹೀನತೆ ಕಡಿಮೆ ಮಾಡುತ್ತದೆ.
ಇದರಲ್ಲಿ ಅತಿ ಹೆಚ್ಚು ಪ್ರಮಾಣದ ಪ್ರೊಟೀನ್ ಅಂಶ ಇರುವುದರಿಂದ ದೇಹದ ಸ್ನಾಯುಗಳ ಬೆಳವಣಿಗೆಗೆ ಸಹಕಾರಿ.
ಹೀಗೆ ಅಣಬೆ ಸೇವನೆಯಿಂದ ಆರೋಗ್ಯ ವರ್ಧನೆ ಖಂಡಿತ. ಆದರೆ ಕೆಲವೊಂದು ಅಣಬೆಗಳು ವಿಷಕಾರಿಯೂ ಹೌದು. ಹಾಗಾಗಿ ಮಾರುಕಟ್ಟೆಯ ಅಧಿಕೃತ ಮಾರಾಟಗಾರರಿಂದ ಮಾತ್ರ ಅಣಬೆ ಖರೀದಿಸುವುದು ಒಳಿತು.