ಅಣಜಿ ಗ್ರಾಮದಲ್ಲಿ ಪುನಿತ್ ಪುಣ್ಯತಿಥಿ; ಅನ್ನಸಂತರ್ಪಣೆ

ದಾವಣಗೆರೆ.ನ.೯ : ಕನ್ನಡ ಚಿತ್ರರಂಗದ ಹೆಸರಾಂತ ನಟ ಪುನಿತ್ ಅವರ ಪುಣ್ಯತಿಥಿ ನಿಮಿತ್ತ ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಅಣಜಿ ಗ್ರಾಮದಲ್ಲಿ  ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಆನಗೋಡು ಜಿ.ಪಂ. ಮಾಜಿ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರಾದ ಕೆ.ಎಸ್. ಬಸವಂತಪ್ಪ ಮಾತನಾಡಿ, ಪುನಿತ್ ಅವರ ಸಾಮಾಜಿಕ ಸೇವಾ ಕಾರ್ಯಗಳ ಕುರಿತು ವಿವರಿಸಿದ್ದಲ್ಲದೇ, ಅವರ ಸರಳ ವ್ಯಕ್ತಿತ್ವದವರಾಗಿದ್ದು, ಅವರು ನಮ್ಮಿಂದ ದೂರವಾಗಿದ್ದರೂ ಅವರು ಮಾಡಿರುವ ಸಾಮಾಜಿಕ ಸೇವಾ ಕಾರ್ಯಗಳು ಅಚ್ಚಳಿಯದೇ ಮನಸ್ಸಿನಲ್ಲಿ ಉಳಿದುಕೊಂಡಿವೆ. ಬದುಕಿರುವಾಗಲೇ ಸಮಾಜಕ್ಕೆ ಒಳಿತಾಗುವಂತಹ ಸೇವಾ ಕಾರ್ಯಕ್ರಮಗಳನ್ನು ಮಾಡಿ ಪುನಿತ್‌ರಂತೆ ಬದುಕಿ ಬಾಳಿ, ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯಲು ಕರೆ ನೀಡಿದರು.ಎ.ಪಿ.ಎಂ.ಸಿ. ಅಧ್ಯಕ್ಷರಾದ ಎಸ್.ಕೆ. ಚಂದ್ರಶೇಖರ್‌ರವರು ಮಾತನಾಡಿ, ಪುನೀತ್‌ರವರನ್ನು ಸ್ಮರಿಸಿ, ಕಣ್ಣುಗಳನ್ನು ದಾನ ಮಾಡುವ ಮೂಲಕ ಈಗಿನ ಯುವ ಪೀಳಿಗೆಯಲ್ಲಿ ಕಣ್ಣುಗಳ ಮಹತ್ವವನ್ನು ಸಾರಿ ಹೋಗಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಅಣಜಿ ಗ್ರಾಮದ ಮುಖಂಡರಾದ ರಾಜಪ್ಪ, ಚನ್ನಪ್ಪ, ಮಿಲ್ಟಿç ಅಂಜಿನಪ್ಪ, ಮಂಜುನಾಥ್, ಮಲ್ಲಿಕಾರ್ಜುನ್, ಗ್ರಾ.ಪಂ. ಸದಸ್ಯ ಹನುಮಂತಪ್ಪ, ಸಂತೋಷ್, ನಾಗರಾಜ್, ರೇವಣಸಿದ್ದಪ್ಪ, ಅಂಜಿನಪ್ಪ, ಮಾಸ್ಟರ್ ಹನುಮಂತಪ್ಪ, ಕರಿಬಸಪ್ಪ ಸೇರಿದಂತೆ ಗ್ರಾಮಸ್ಥರು, ಅಭಿಮಾನಿಗಳು, ಮತ್ತಿತರರು ಭಾಗವಹಿಸಿದ್ದರು.