ಅಣಜಿಯಲ್ಲಿ ಕೆರೆ ಹೊನ್ನಮ್ಮ ದೇವಿ ಜಾತ್ರೆ

ದಾವಣಗೆರೆ.ಮಾ.೧೩ : ಮಾಯಕೊಂಡ ವಿಧಾನಸಭಾ ಕ್ಷೇತ್ರದ ಅಣಜಿ ಗ್ರಾಮದಲ್ಲಿನ ಶಿವ ಶರಣೇ ಶ್ರೀ ಕೆರೆ ಹೊನ್ನಮ್ಮ ದೇವಿ ಜಾತ್ರಾ ಮಹೋತ್ಸವ ಬಹಳ ವರ್ಷಗಳ ನಂತರ ಅದ್ದೂರಿಯಾಗಿ ಆರಂಭಗೊಂಡಿದೆ.ಕಳೆದ ಹನ್ನೊಂದು ವರ್ಷಗಳ ನಂತರದ ಈ ಜಾತ್ರಾ ಮಹೋತ್ಸವವು ಶನಿವಾರದಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಜಾತ್ರೆ ಅಂಗವಾಗಿ ಜಗಜಟ್ಟಿಗಳ ಕುಸ್ತಿ ಕಾಳಗ ರಂಗೇರಿದೆ. ಕುಸ್ತಿ ಕ್ರೀಡೆ ಮತ್ತು ಕುಸ್ತಿ ಪಟುಗಳ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಬಲ ಆಕಾಂಕ್ಷಿ ಜಿ.ಎಸ್. ಶ್ಯಾಮ್ ಮತ್ತು ಬಿಜೆಪಿ ಮುಖಂಡ ಬಿ.ಟಿ. ಸಿದ್ದಪ್ಪ ಕುಸ್ತಿ ಪಂದ್ಯಾವಳಿ ಆಯೋಜನೆಗೆ ಪ್ರಮುಖ ಪಾತ್ರ ವಹಿಸಿದ್ದು, ಸಹಕಾರ  ನೀಡಿದ್ದಾರೆ. ಅಲ್ಲದೇ ಕುಸ್ತಿ ಪಟುಗಳಿಗೆ ಶುಭ ಹಾರೈಸಿ, ಕುಸ್ತಿಯಲ್ಲಿ ಸಾಧನೆ ಮಾಡಿ ರಾಜ್ಯದ ಹಿರಿಮೆ, ಗರಿಮೆ ನಾಡಿನಾದ್ಯಂತ ಪಸರಿಸುವಂತೆ ಜಿ.ಎಸ್. ಶ್ಯಾಮ್ ಸಲಹೆ ನೀಡಿದರು.ಇದೇ ವೇಳೆ ಅಣಜಿ ಗ್ರಾಮದ ಮುಖಂಡರು, ಯುವಕರು ಜಿ.ಎಸ್. ಶ್ಯಾಮ್ ಮತ್ತು ಬಿ.ಟಿ. ಸಿದ್ದಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ವಿವಿಧೆಡೆಗಳಿಂದ ಕುಸ್ತಿ ಪಟುಗಳು ಆಗಮಿಸಿದ್ದು, ಅಖಾಡಕ್ಕಿಳಿದು ತಮ್ಮ ಶಕ್ತಿ ಪ್ರದರ್ಶಿಸಿ ಗೆಲುವಿಗಾಗಿ ಎದುರಾಳಿಗಳೊಂದಿಗೆ ಸೇಣಸಾಡುವುದು ಪ್ರೇಕ್ಷಕರ ಗಮನ ಸೆಳೆಯುತ್ತಿದೆ.ಈ ಕಾರ್ಯಕ್ರಮವನ್ನು ಹೆಬ್ಬಾಳು ಮಠದ ಮಹಾಂತ ಮಹಾ ರುದ್ರಸ್ವಾಮಿಗಳು ಉದ್ಘಾಟಿಸಿದರು.  ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಎಸ್.ಕೆ ಚಂದ್ರಪ್ಪ, ಎನ್.ಸಿ. ಪ್ರಕಾಶ್ ಪಾಟೀಲ್, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ತಿಪ್ಪಣ್ಣ, ಶೆಟ್ರು ಮಲ್ಲಿಕಾರ್ಜುನ್, ಕಂಚಿಗೆರೆ ನಾಗಪ್ಪ, ಆಂಜಿನಪ್ಪ, ಚಂದ್ರಪ್ಪ ಬಿ, ಬಸವಲಿಂಗಪ್ಪ, ದಾನಪ್ಪ, ಅಣಜಿ ಗುಡ್ಡೇಶ್, ಮಲ್ಲಿಕಾರ್ಜುನ, ಸಿ.ವಿ.ರವಿ, ಕಿತ್ತೂರು ವೀರಣ್ಣ, ಪರಶುರಾಮಪ್ಪ, ಪ್ರಕಾಶ್, ಮಾಜಿ ಚೇರ್ ಮೆನ್ ಹನುಮಂತಪ್ಪ ಇವರ ಪುತ್ರ ರಾಜು, ಕೆರನಳ್ಳಿ ಗ್ರಾಮದ ಮುಖ್ಯಸ್ಥರು, ಅಣಜಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಅಣಜಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಮುಖಂಡರುಗಳು, ಹಿರಿಯರು, ಮಹಿಳೆಯರು, ಯುವಕರು ಹಾಗೂ ಕುಸ್ತಿ ಪಟುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.