ಅಣಜಿಗೆರೆ ಗ್ರಾ.ಪಂ ಅಧ್ಯಕ್ಷರಾಗಿ ಎಸ್.ಬಿ.ಕಿರಣ್ ಕುಮಾರ್ ಅವಿರೋಧ ಆಯ್ಕೆ

ಹರಪನಹಳ್ಳಿ.ಏ.೭: ಅಣಜಿಗೆರೆ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಎಸ್.ಬಿ. ಕಿರಣ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.ಬಸಣ್ಣ ಅವರು ರಾಜಿನಾಮೆ ಸಲ್ಲಿಸಿದ್ದರಿಂದ ತೆರವಾದ ಸಾಮಾನ್ಯ ಮೀಸಲು ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದು.ನಾಮಪತ್ರ ಸಿಂಧುವಾಗಿದ್ದು.ಒಟ್ಟು 19 ಜನ ಸದಸ್ಯರಿದ್ದು.ಸರ್ವ ಸದಸ್ಯರ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ತಹಶೀಲ್ದಾರ್ ಶಿವಕುಮಾರ್ ಬಿರಾದಾರ್ ಘೋಷಿಸಿದರು.ಗ್ರಾಮಪಂಚಾಯಿತಿ ಅಧ್ಯಕ್ಷ ಕಿರಣ್ ಕುಮಾರ್ ಎಸ್.ಬಿ.ಮಾತನಾಡಿ,ಗ್ರಾಮಪಂಚಾಯಿತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಿಗೂ ಮೂಲಸೌಕರ್ಯ ಒದಗಿಸಲು ಹಾಗೂ ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸುವೆ ಗ್ರಾಮಪಂಚಾಯಿತಿ ಅನುದಾನ ಸಮರ್ಪಕ ಅನುಷ್ಠಾನಗೊಳಿಸಲು ಸದಾ ಬದ್ದನಾಗಿರುವೆ. ಸರ್ವ ಸದಸ್ಯರು ಸಹಕರಿಸಬೇಕು ಎಂದರು.ಕಾಂಗ್ರೆಸ್ ಪಕ್ಷದ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಭೇಟಿ ನೀಡಿ ನೂತನ ಅಧ್ಯಕ್ಷರಿಗೆ ಶುಭಕೋರಿದರು.ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷರಾದ ಟಿ.ಶಿವಣ್ಣ, ಆರ್.ಸಿದ್ದೇಶ್, ಯು.ಮಂಜುನಾಥ್, ಬಸವರಾಜಪ್ಪ, ಉಪಾಧ್ಯಕ್ಷೆ ನಾಗಮ್ಮ, ಸದಸ್ಯರಾದ ವಕೀಲ ಮರಿಯಪ್ಪ, ರೇಣುಕಮ್ಮ,ಗೀತಾ,ಸುಧಾ,ಸುನಿತಾ,ಜ್ಯೋತಿ, ಮಂಜಮ್ಮ, ಜಯ್ಯಮ್ಮ, ರುದ್ರೇಶ್, ಆಯಿಷಾ, ಸುಧಾ, ರವೀಂದ್ರ, ಮುಖಂಡರಾದ ನಿವೃತ್ತ ಶಿಕ್ಷಕ ರೇವಣಸಿದ್ದಪ್ಪ,ಹೊಸಮನಿ ನಾಗರಾಜ್.ಯು, ರೇವಣಸಿದ್ದಪ್ಪ, ದಾದಪೀರ್, ವೈ.ನಾಗರಾಜ್, ಅಣಜಿಗೆರೆ ನಿಂಗಪ್ಪ,ಶಂಭುಲಿಂಗಪ್ಪ, ಪಿಡಿಓ ಉಮೇಶ್ ಸೇರಿದಂತೆ ಇದ್ದರು.