ಅಡ್ಡೂರು ಶ್ರೀನಿವಾಸಲು ಕಲಬುರಗಿ ನೂತನ ಎಸ್ಪಿ, ಡಿಸಿಪಿಯಾಗಿ ಕನಿಕಾ ಸಿಕ್ರಿವಾಲ್

ಕಲಬುರಗಿ,ಸೆ.5-ಡಿಸಿಪಿ ಅಡ್ಡೂರು ಶ್ರೀನಿವಾಸಲು ಅವರನ್ನು ಕಲಬುರಗಿ ಜಿಲ್ಲೆಯ ನೂತನ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಎಸ್ಪಿಯಾಗಿದ್ದ ಇಶಾ ಪಂತ್ ಅವರು ಕೇಂದ್ರ ಸೇವೆಗೆ ತೆರಳುತ್ತಿರುವುದರಿಂದ ಅವರ ಸ್ಥಾನಕ್ಕೆ ಶ್ರೀನಿವಾಸಲು ಅವರನ್ನು ಗರ್ವಾವಣೆ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
ಕನಿಕಾ ಸಿಕ್ರಿವಾಲ್ ಅವರನ್ನು ಡಿಸಿಪಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಇವರು ಈ ಹಿಂದೆ ದಾವಣಗೆರೆಯಲ್ಲಿ ಎಎಸ್‍ಪಿಯಾಗಿ ಸೇವೆ ಸಲ್ಲಿಸಿದ್ದರು.