ಅಡ್ಡಪಲ್ಲಕ್ಕಿ ಮಹೋತ್ಸವ

ಬೈಲಹೊಂಗಲ,ಮಾ27: ತಾಲೂಕಿನ ವಣ್ಣೂರು ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ, ಶ್ರೀ ಜಗದ್ಗುರು ವಿಶ್ವರಾಧ್ಯ, ಶ್ರೀ ಪ್ರಭುದೇವರ ಮೂರ್ತಿ ಪ್ರತಿಷ್ಠಾಪಣೆ, ಬಾಳೇಹೊನ್ನೂರಿನ ರಂಭಾಪೂರಿ ಮಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ, ಧರ್ಮಸಭೆ ಕಾರ್ಯಕ್ರಮಗಳು ಮಾ. 28 ರಿಂದ ಏ. 1 ರವರೆಗೆ ಸಡಗರ-ಸಂಭ್ರಮದಿಂದ ಜರುಗಲಿವೆ.
ದಿ.28 ರಂದು ವಣ್ಣೂರು ಗ್ರಾಮದಲ್ಲಿ ಶ್ರೀ ವಿಶ್ವರಾಧ್ಯರ ಮತ್ತು ಶ್ರೀ ಪ್ರಭುದೇವರ ಮೂರ್ತಿಗಳ ಮೆರವಣಿಗೆ ನಡೆಯಲಿದೆ. ದಿ. 30 ರಂದು ಬ್ರಾಹ್ಮಿ ಮುಹೂರ್ತದಲ್ಲಿ ಮೂರ್ತಿಗಳ ಪ್ರತಿಷ್ಠಾಪಣೆ, ಬೆಳಿಗ್ಗೆ 9 ಘಂಟೆಗೆ ವೀರಭದ್ರೇಶ್ವರರ ಪಲ್ಲಕ್ಕಿ ಉತ್ಸವ, 12-30 ಕ್ಕೆ ಅನ್ನ ಪ್ರಸಾದ ನಡೆಯಲಿದೆ. ಏ. 1 ರಂದು ಬೆಳಿಗ್ಗೆ ಅಯ್ಯಾಚಾರ ದೀಕ್ಷಾ ಕಾರ್ಯಕ್ರಮ, 10-00 ಘಂಟೆಗೆ ಬಾಳೇಹೊನ್ನೂರಿನ ರಂಭಾಪೂರಿ ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ, 11-00 ಘಂಟೆಗೆ ಧರ್ಮಸಭೆ ಜರುಗಲಿದೆ.
ಹಣಬರಹಟ್ಟಿಯ ಕೆಳದಿ ಹಿರೇಮಠದ ಪುಜ್ಯ ಬಸವಲಿಂಗ ಶಿವಾಚವಾರ್ಯ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಪೂಜ್ಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸವದತ್ತಿಯ ಮೂಲಿಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ದೊಡವಾಡ ಹಿರೇಮಠದ ಪೂಜ್ಯ ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಂಗೊಳ್ಳಿ ಹಿರೇಮಠದ ಪೂಜ್ಯ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಮಲ್ಲಾಪೂರದ ಗಾಳೇಶ್ವರ ಮಠದ ಪೂಜ್ಯ ಚಿದಾನಂದ ಸ್ವಾಮೀಜಿ, ಸುತಗಟ್ಟಿಯ ಹಿರೇಮಠದ ಶ್ರೀ ಸಿದ್ದಲಿಂಗ ದೇವರು ಕಳಸದ ಹಿರೇಮಠದ ವೇ.ಮೂ.ವೀರಭದ್ರಶಾಸ್ತ್ರಿಗಳು, ರಾಣೇಬೆಣ್ಣೂರಿನ ಹಿರೇಮಠದ ವೇ.ಮೂ.ಪುನೀತ ಶಾಸ್ತ್ರಿಗಳು, ಸುತಗಟ್ಟಿಯ ಹಿರೇಮಠದ ವೇ.ಮೂ.ಚನ್ನಬಸಯ್ಯ ಶಾಸ್ತ್ರಿಗಳು, ಕಾಗತಿಯ ಶಿವಪೂಜಿ ಮಠದ ರಾಚಯ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
ನಿಪ್ಪಾಣಿಯ ಶ್ರೀ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಎಂ.ಡಿ. ಶಿವು ಕುಲಕರ್ಣಿ ಅವರು ಕಾರ್ಯಕ್ರಮ ಉದ್ಗಾಟಿಸಲಿದ್ದು, ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ನೇಸರಗಿಯ ಸಿಪಿಐ ರಾಘವೇಂದ್ರ ಹವಾಲ್ದಾರ, ಪಿಡಿಓ ಮಲ್ಲಿಕಾರ್ಜುನ ನಾಯಕ, ಗುತ್ತಿಗೆದಾರ ಎಂ.ಬಿ.ಹಿರೇಮಠ ಮುಂತಾದವರು ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ. ಪ್ರತಿದಿನ ಸವದತ್ತಿಯ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರಿಂದ ಅಧ್ಯಾತ್ಮಿಕ ಪ್ರವಚನ ಜರುಗಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ಮೂರ್ತಿಗಳಿಗೆ ನಿತ್ಯ ವಿಶೇಷ ಪೂಜೆ, ಪ್ರಾರ್ಥನೆ, ಸಹಸ್ರ ಮಂತ್ರ ಪಠಣ, ಅಭೀಷೇಕ ಜರುಗಲಿವೆ ಎಂದು ಶ್ರೀ ಜಗದ್ಘುರು ವಿಶ್ವರಾಧ್ಯ ಟ್ರಸ್ಟ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.