ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಜಾತ್ರಾ ಉತ್ಸವ ಸಮಿತಿ ರಚನೆ

ಸುಳ್ಯ, ಜ.೧೧- ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ವರ್ಷಾವಧಿ ಜಾತ್ರೋತ್ಸವವು ಫೆಬ್ರವರಿ ತಿಂಗಳಲ್ಲಿ ಜರುಗಲಿದ್ದು, ಜಾತ್ರೋತ್ಸವದ ಉತ್ಸವ ಸಮಿತಿಯನ್ನು ದೇವಾಲಯದ ಶ್ರೀ ಕಾರ್ತಿಕೇಯ ಸಭಾಭವನದಲ್ಲಿ ರಚಿಸಲಾಯಿತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯರಾಮ ರೈ ಜಾಲ್ಸೂರು ಅಧ್ಯಕ್ಷತೆ ವಹಿಸಿದ್ದರು. ನೂತನ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಸುಳ್ಯ ಕೃಷಿ ತಾಂತ್ರಿಕ ಅಧಿಕಾರಿ ಮೋಹನ ನಂಗಾರು ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಗಳಾಗಿ ಶಿವಪ್ಪ ಕಜೆಗದ್ದೆ, ತಿರುಮಲೇಶ್ವರ ಕುತ್ಯಾಳ, ರುಕ್ಮಯ್ಯ ಸೋಣಂಗೇರಿ, ಕೋಶಾಧ್ಯಕ್ಷರಾಗಿ ಚಂದ್ರಶೇಖರ ಆಳಂಕಲ್ಯ ಅವರನ್ನು ಆಯ್ಕೆ ಮಾಡಲಾಯಿತು. ಜಾತ್ರೋತ್ಸವದ ಉತ್ಸವ ಸಮಿತಿಯಲ್ಲಿ ಹಲವು ಮಂದಿಯನ್ನು ಉಪಾಧ್ಯಕ್ಷರುಗಳಾಗಿ, ಸದಸ್ಯರುಗಳಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಗುರುರಾಜ್ ಭಟ್ ಅಡ್ಕಾರು, ವ್ಯವಸ್ಥಾಪನ ಸಮಿತಿಯ ಸದಸ್ಯರುಗಳು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಧಾಕರ ಕಾಮತ್ ವಿನೋಬನಗರ, ಜಾತ್ರೋತ್ಸವ ಸಮಿತಿ ಪೂರ್ವಾಧ್ಯಕ್ಷ ಬಾಲಚಂದ್ರ ಅಡ್ಕಾರು , ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ವಿವಿಧ ಬೈಲುವಾರು ಸಮಿತಿಯ ಸಂಚಾಲಕರುಗಳು, ಅಧ್ಯಕ್ಷರುಗಳು, ಸದಸ್ಯರುಗಳು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.