ಅಡ್ಕಾರು : ಗೂಡಂಗಡಿ ಮುಂದಿನ ಬೆಂಚು ಮುರಿದು ಹಾಕಿದ ಪೊಲೀಸರು

ಸುಳ್ಯ, ಜೂ.೪- ಗೂಡಂಗಡಿ ಮುಂದೆ ಹಾಕಲಾಗಿದ್ದ ಎರಡು ಬೆಂಚು ಹಾಗೂ ಒಂದು ಟೇಬಲನ್ನು ಪೊಲೀಸರು ಬಂದು ಮುರಿದು ಹಾಕಿರುವರೆನ್ನಲಾದ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಅಡ್ಕಾರಿನಲ್ಲಿ ಕಳೆದ ೨೨ ವರ್ಷಗಳಿಂದ ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದ ಕುಂಞಿಮು ಎಂಬವರ ಅಂಗಡಿಯ ಮುಂದೆ ಹಾಕಲಾಗಿದ್ದ ಬೆಂಚು ಹಾಗೂ ಟೇಬಲನ್ನು ಮುರಿದು ಹಾಕಲಾಗಿದೆ. ಬುಧವಾರ ರಾತ್ರಿ ಪೊಲೀಸರು ಇದನ್ನು ಮುರಿದು ಹಾಕಿರುವುದಾಗಿ ಅಂಗಡಿ ಮಾಲಕ ಕುಂಞಿಮು ತಿಳಿಸಿದ್ದಾರೆ.
ಹಣಕಾಸು ಉದ್ಯ