ಅಡುಗೆ ಸಿಬ್ಬಂಧಿಗಳಿಗೆ ತರಬೇತಿ ಕಾರ್ಯಾಗಾರ

ನಂಜನಗೂಡು:ಏ:17: ಶಿಕ್ಷಣ ಇಲಾಖೆ ವತಿಯಿಂದ ಅಡುಗೆ ಸಿಬ್ಬಂದಿಗಳಿಗೆ ಪುನಶ್ಚೇತನ ತರಬೇತಿ ಕಾರ್ಯ ಗಾರ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ನಗರದ ನೀಲಕಂ ಠೇಶ್ವರ ಶಾಲೆ ಮತ್ತು ದಳವಾಯಿ ಶಾಲೆ ಹಮ್ಮಿಕೊಳ್ಳಲಾಗಿತ್ತು ಸುಮಾರು 400 ಅಡುಗೆ ಸಿಬ್ಬಂದಿ ಗಳು ಭಾಗವಹಿಸಿದರು ಈ ಕಾರ್ಯಾಗಾರ ತರಬೇತಿ ಕಾರ್ಯಕ್ರಮವನ್ನು ಸಿಎಂ ರಾಜು ಉದ್ಘಾಟನೆ ಮಾಡಿದರು.
ಚೌಡೇಶ್ವರಿ ಗ್ಯಾಸ್ ಮಾಲೀಕರಾದ ಗೋವರ್ಧನ್ ಅವರು ತರಬೇತಿ ಕಾರ್ಯಗಾರದಲ್ಲಿ ಗ್ಯಾಸ್ ಸಿಲೆಂಡರ್ ಅನ್ನು ಯಾವ ರೀತಿ ಉಪಯೋಗಿಸಬೇಕು ಗ್ಯಾಸ್ ಉಳಿತಾಯ ಬಗ್ಗೆ ಮಾಹಿತಿ ನೀಡಿದರು.
ಸ್ಕೂಲ್ ಗಳಲ್ಲಿ ಅಡುಗೆ ಸಿಬ್ಬಂದಿಗಳು ಗ್ಯಾಸ್ ಸಿಲೆಂಡರ್ ಬಂದಾಗ ಸಿಲಿಂಡರ್ ಮೇಲಿರುವ ಕ್ಯಾಪ್ ಪರಿಶೀಲನೆ ಮಾಡಬೇಕು ಜೊತೆಗೆ ಸಿಲೆಂಡರ್ ತೂಕ ಎಷ್ಟಿದೆ ಎಂಬುದನ್ನು ತಿಳಿಯಬೇಕು ತೂಕ ತಿಳಿಯಲು ಸಿಲೆಂಡರ್ ತರುವನ ಹತ್ತಿರ ಕೇಳಿದರೆ ಸ್ಥಳದಲ್ಲೇ ಆತ ತೂಕ ಮಾಡಿಕೊಡುತ್ತಾನೆ ಮತ್ತು ಕಾಟನ್ ಬಟ್ಟೆಯನ್ನು ಬಳಸಬೇಕು. ಗ್ಯಾಸ್ ಉಳಿತಾಯ ಬಗ್ಗೆ ಹೇಳುವುದಾದರೆ ಕುಕ್ಕರ್ ಬಳಸಬೇಕು ನೆನೆಸಿದ ಕಾಳುಗಳನ್ನು ಬಳಸಬೇಕು ಮತ್ತು ಮನೆಯ ಕುಟುಂಬಸ್ಥರು ಒಂದೇ ಸಲ ಒಟ್ಟಿಗೆ ಕೂತು ಊಟ ಮಾಡಬೇಕು ಹಾಗೂ ಫೀಡ್ಸ್ ನಲ್ಲಿ ಇಟ್ಟ ಪದಾರ್ಥಗಳನ್ನು ತಕ್ಷಣ ಬಳಸಬಾರದು.
ನೀರಿನಲ್ಲಿ ನೆನೆಸಿಟ್ಟ ಕಾಳುಗಳನ್ನು ಬಳಸಿದರೆ ಗ್ಯಾಸ್ ಉಳಿತಾಯ ಮಾಡಬಹುದು ಕಾರಣ ನೀರಿನಲ್ಲಿ ನೆನೆದು ಮೆತ್ತಗಾಗಿ ಇರುತ್ತದೆ ಮನೆಯಲ್ಲಿರುವ ಕುಟುಂಬಸ್ಥರು ಒಂದೇ ಸಲ ಊಟ ಮಾಡಬೇಕು ಕಾರಣ ಊಟ ಬಿಸಿಯಾಗಿರುತ್ತದೆ ಒಂದೇ ಸಲ ಮಾಡಿದರೆ ಪುನಃ ಬಿಸಿ ಮಾಡಲು ಬೇಕಾಗಿಲ್ಲ ಅದೇ ಬೇರೆ ಬೇರೆ ಟೈಮಿಂಗ್ ನಲ್ಲಿ ಊಟ ಮಾಡಿದರೆ ಬಿಸಿ ಮಾಡಲು ಪುನಹ ಗ್ಯಾಸ್ ಹಚ್ಚಬೇಕು ಆದ್ದರಿಂದ ಒಂದೇ ಸಲ ಊಟ ಮಾಡಿದರೆ ಗ್ಯಾಸ್ ಉಳಿಸಬಹುದು. ಈ ರೀತಿ ಗ್ಯಾಸ್ ಉಪಯೋಗ ಮತ್ತು ಉಳಿತಾಯದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.
ಅಕ್ಷರ ದಾಸೋಹ ಮಲ್ಲಿಕಾರ್ಜುನ ಸ್ವಾಮಿ, ಬಿಆರ್‍ಸಿ ಮಹೇಶ್ ಸೇರಿದಂತೆ ತಾಲ್ಲೂಕಿನ ಎಲ್ಲ ಶಾಲೆಯ ಅಡುಗೆ ಸಿಬ್ಬಂದಿಗಳು ಭಾಗವಹಿಸಿದರು.