ಅಡುಗೆ ಸಿಬ್ಬಂದಿಗೆ ಗೌರವಯುತ ಬೀಳ್ಕೊಡುಗೆ

ದೇವದುರ್ಗ.ಜೂ.೨-ತಾಲೂಕಿನ ಗಲಗ ಗ್ರಾಮದ ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಅಡುಗೆ ಸಿಬ್ಬಂದಿ ಶಿವರಾಜ ನಿವೃತ್ತ ಹೊಂದಿದ ಹಿನ್ನೆಲೆ ಇಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸನ್ಮಾನಿಸಿ ಬೀಳ್ಕೊಡುಗೆ ಮಾಡಲಾಯಿತು.
ತಾಲೂಕು ಅಧಿಕಾರಿ ಚಂದ್ರಶೇಖರ ಬಿರಾದಾರ್ ಮಾತನಾಡಿ, ನಮ್ಮ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರೂ ನಿವೃತ್ತಿ ಸಮಯದಲ್ಲಿ ಸನ್ಮಾನಕ್ಕೆ ಅರ್ಹರು. ಹಾಸ್ಟೆಲ್ ವಿದ್ಯಾರ್ಥಿಗಳ ಸೇವೆ ತಮ್ಮ ಜೀವನ ಸವಿಸಿದ ಶಿವರಾಜ ನಿವೃತ್ತಿ ಹೊಂದುತ್ತಿರುವುದು ಬೇಸರದ ಸಂಗತಿ. ಆದರೂ ನಿಯಮ ಪಾಲನೆ ಮಾಡಬೇಕು. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹೇಳಿದರು.
ದ್ವಿತೀಯ ದರ್ಜೆ ಸಹಾಯಕ ಯಲ್ಲಪ್ಪ ಗೌಳಿ, ನಿಲಯ ಮೇಲ್ವಿಚಾರಕ ದ್ಯಾವಪ್ಪ ಯಂಕಂಚಿ, ಬಸವರಾಜ, ಅರ್ಜುನ, ಸೋಮಣ್ಣ, ವಿಜಯಾ, ಡಾಟಾ ಎಂಟ್ರಿ ಆಪರೇಟರ್ ಹನುಮಂತ, ಡಿ ಗ್ರೂಪ್ ನೌಕರರಾದ ರವಿ, ಮಹೇಶ ಹಿರೇಮಠ, ಮೌನೇಶ, ದೇವರಾಜ, ಹನುಮಂತರಾಯ ಇದ್ದರು.