
ಕಲಬುರಗಿ:ಜು.16:ಯಾವುದೇ ಜೀವಿಯಾಗಿರಲಿ ಅದರ ಶಕ್ತಿಯ ಮೂಲ ಸಸ್ಯ ಮತ್ತು ಪ್ರಾಣಿ. ಮನುಷ್ಯನ ಮಾನಸಿಕ ಸವಾಲುಗಳನ್ನು ಎದುರಿಸಲು ಸಹ ಅವಶ್ಯ .ಸಮತೂಕದ ಆಹಾರ ಮಾನವನಿಗೆ ಅವಶ್ಯ
ಮನುಷ್ಯನ ಜೀವಿತಾವಧಿಯಲ್ಲಿ ನ್ಯೂಟ್ರಿಯಂಟ್ಸ್ ಭಿನ್ನವಾಗಿರುತ್ತದೆ. ನಾವು ನಮ್ಮ ಶ್ರಮಕ್ಕೆ ಅನುಗುಣವಾಗಿ ಅಷ್ಟೇ ಸಮ ಪ್ರಮಾಣದ ಕ್ಯಾಲೊರಿ ಯುಕ್ತ ಆಹಾರ ಸೇವಿಸಬೇಕು. ಏಕದಳ ಕಾಳು ಹಣ್ಣು, ತರಕಾರಿಗಳು ಹಾಗೆಯೇ ದೇಹಕ್ಕೆ 30% ಫ್ಯಾಟ್ ಅವಶ್ಯ ಎಂದು ಹೇಳಿದ ಅವರು ಮುಂದುವರೆದು ಮಾತನಾಡಿದ ಅವರು “ಅಡುಗೆ ಮನೆಯೆ ಮಾನವನ ನಿಜವಾದ ಔಷಧಾಲಯ” ಎಂದು ಹೇಳಿದ ಅವರು ಆರೋಗ್ಯ ವಂತ ಬದುಕಿಗೆ ನಮ್ಮ ಆಹಾರದ ಶೈಲಿ ಬದಲಾಯಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಚಂದ್ರಕಲಾ ಪಾಟೀಲ ಅವರು ಮಾತನಾಡುತ್ತಾ ನನ್ನ ಶಿಷ್ಯೆ ಇಂದು ನನಗಿಂತಲು ಮಿಗಿಲಾಗಿ ಒಳ್ಳೆಯ ಉಪನ್ಯಾಸ ನೀಡಿ ನನ್ನನ್ನು ಸಂತೋಷಗೊಳಿಸಿದ್ದಾರೆ ಎಂದು ಕೊಂಡಾಡಿದರು.ಕಾರ್ಯಕ್ರಮದಲ್ಲಿ.ರಾ.ಸೇ.ಯೋ.ಅಧಿಕಾರಿಗಳಾದ ಡಾ.ಮಹೇಶ ಗಂವ್ಹಾರ, ಡಾ.ರೇಣುಕಾ ಹಾಗರಗುಂಡಗಿ,ಶ್ರೀಮತಿ ಸುಷ್ಮಾ ಕುಲಕರ್ಣಿ, ಡಾ.ಶರಣಮ್ಮ ಕುಪ್ಪಿ.ಡಾ.ಪರವಿನ್ ರಾಜಾಸಾಬ್,ಪೆÇ್ರೀ.ಶಿವಲೀಲಾ ಧೋತ್ರೆ, ಪೆÇ್ರ. ಶಿಲ್ಪಾ ಬಂದರವಾಡ ಮೊದಲಾದವರು ಭಾಗವಹಿಸಿದ್ದರು. ಕುಮಾರಿ ಅಂಜಲಿ ನಿರೂಪಿಸಿದರು, ಕುಮಾರಿ ಆಫ್ರಿನ್ ಸ್ವಾಗತಿಸಿದರು, ಸೃಷ್ಟಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕಾರ್ಯಕ್ರಮದ ನಂತರ ಶ್ರೀಮತಿ ವೀರಮ್ಮ ಗಂಗಸಿರಿ ತಂಡದ ಶಿಭಿರಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಯಿಸಕೊಟ್ಟರು ಎಂದು ಮಹಾವಿದ್ಯಾಲಯದ ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ ಪತ್ತಾರ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.