ಅಡುಗೆ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಲು ಮನವಿ

ದಾವಣಗೆರೆ.ಏ.೨೯; ರಾಜ್ಯದಲ್ಲಿ ಸುಮಾರು ಲಕ್ಷಾಂತರ ಅಡುಗೆ ಕಾರ್ಮಿಕರು ಸರ್ಕಾರದ ಸೌಲಭ್ಯದಿಂದ ವಂಚಿತಗೊಂಡಿದ್ದು, ಸರ್ಕಾರ ಅಡುಗೆ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಕರ್ನಾಟಕ ರಾಜ್ಯ ಅಡುಗೆ ಮಾಡುವವರು ಮತ್ತು ಸಹಾಯಕರ ಅಸಂಘಟಿತ ಕಾರ್ಮಿಕರ ಸಂಘದ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಬಿ.ಜಿ.ಶಂಕರರಾವ್ ಮನವಿ ಮಾಡಿದ್ದಾರೆ.ಅಡುಗೆ ಕಾರ್ಮಿಕರಿಗೆ ಯಾವುದೇ ರೀತಿ ಸರಕಾರದಿಂದ ಸೌಲಭ್ಯಗಳು ಇರುವುದಿಲ್ಲ ಆದ್ದರಿಂದ ಸರ್ಕಾರ ಎಲ್ಲಾ ಕಾರ್ಮಿಕರನ್ನು ಗುರುತಿಸಿದೆ ಆದರೆ ಅಡುಗೆ ಕಾರ್ಮಿಕರನ್ನು ಗುರುತಿಸಿರುವುದಿಲ್ಲ. ಸರ್ಕಾರ ಕೂಡಲೇ ಅಡುಗೆ ಕಾರ್ಮಿಕರನ್ನು ಗುರುತಿಸಿ ಡಾ.ಅಂಬೇಡ್ಕರ್ ಕಾರ್ಮಿಕರ ಸಹಾಯ ಹಸ್ತ ಯೋಜನೆ ಅಡಿಯಲ್ಲಿ ಕಾರ್ಮಿಕರನ್ನು ಸೇರಿಸಬೇಕು ಎಂದು ಹೇಳಿದ್ದಾರೆ.ಸೌಲಭ್ಯಗಳಿಂದ ವಂಚಿತರಾಗಿ ಬದುಕುತ್ತಿರುವ ಅಡುಗೆ ಕಾರ್ಮಿಕರು ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ಅಡುಗೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಇಂತಹ ಲಾಕ್‌ಡೌನ್ ಸಂದರ್ಭದಲ್ಲಿ ಸಹಾಯ ಧನ ನೀಡಬೇಕು ಎಂದರು.ಸರ್ಕಾರ ನಿಗಧಿ ಪಡಿಸಿರುವ ಸಮಯ 6 ಗಂಟೆಯಿAದ ಬೆಳಗ್ಗೆ 10 ಗಂಟೆವರೆಗೂ ಮಾತ್ರ ಆಗಿದ್ದು, ಮದುವೆ ಸಮಾರಂಭ, ಗೃಹ ಪ್ರವೇಶ ಕಾರ್ಯಕ್ರಮಗಳ ಸಮಯವು ಸರಿಯಾದ ಸಮಯಕ್ಕೆ ನಡೆಯುವುದಿಲ್ಲ ಕಾರಣ ಅಡುಗೆ ಕಾರ್ಮಿಕರು ಅವರು ನಿಗಧಿ ಪಡಿಸಿದ ಸಮಯಕ್ಕೆ ಹೋಗುವ ಪರಿಸ್ಥಿತಿ ಇರುವ ಕಾರಣ ಅಡುಗೆ ಕಾರ್ಮಿಕರಿಗೆ ಹೋಗುವುದಕ್ಕೆ ಅನುಮತಿ ಸರ್ಕಾರ ನೀಡಬೇಕು ಎಂದು ವಿನಂತಿಸಿದ್ದ