ಅಡುಗೆ ಕಾರ್ಮಿಕರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

ಮಾಲೂರು.ನ೧೪:ರಾಜ್ಯ ಸರಕಾರ ಅಡುಗೆ ಕೆಲಸದವರಿಗೆ ಗುರುತಿನ ಚೀಟಿ ವಿತರಣೆ ಜೊತೆಗೆ ಅವರ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪಿಸುವಂತೆ ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ ರಾಜ್ಯಾಧ್ಯಕ್ಷ ಸುರೇಶ್ ಕುಮಾರ್ ತಿಳಿಸಿದರು.
ಪಟ್ಟಣದ ಮಾಲೂರು-ಬೆಂಗಳೂರು ರಸ್ತೆಯ ವಿಶ್ವನಾಥ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್, ಕರ್ನಾಟಕ ಅಡುಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಯೂನಿಯನ್ ಮಾಲೂರು ಶಾಖೆ ರಚನೆ, ಶ್ರೀದೇವಿ ಅನ್ನಪೂರ್ಣೇಶ್ವರಿ, ಭುವನೇಶ್ವರಿ ವಿಶೇಷ ಪೂಜೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಿರಿಯ ಅಡುಗೆ ಕೆಲಸಗಾರರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಶೇ೮೦ರಷ್ಟು ಅಸಂಘಟಿತ ಕಾರ್ಮಿಕರು ವಿವಿಧ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಅವರಿಗೆ ಸಾಮಾಜಿಕ ಭದ್ರತೆಯೊಜನೆ ಇಲ್ಲದಂತಾಗಿದೆ.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಸಂಘಟಿತ ಕಾರ್ಮಿಕ ಕಾಯ್ದೆಯನ್ನು ಸಂಸತ್‌ನಲ್ಲಿ ಮಂಡಿಸಿದರು. ಪ್ರತಿರಾಜ್ಯದಲ್ಲಿಯು ಕಾರ್ಮಿಕ ಕಾಯ್ದೆಯನ್ನು ಅನುಷ್ಟಾನಗೊಳಿಸುವಂತೆ ಆದೇಶಿಸಿದ್ದರು, ಅದರಂತೆ ರಾಜ್ಯದಲ್ಲಿಯೂ ಅಸಂಘಟಿತ ಕಾರ್ಮಿಕ ಮಂಡಳಿ ಸ್ಥಾಪನೆ ಮಾಡಲಾಗಿದೆ. ಸರಕಾರದಲ್ಲಿ ರೀತಿ ನೀತಿ ರೂಪಿಸುವ ಹಂತದಲ್ಲಿ ಬೆಳೆದಿದ್ದೆವೆ. ಅಡುಗೆ ಕಾರ್ಮಿಕರು ಬೆಂಕಿಯ ಮುಂದೆ ಶ್ರಮವಹಿಸಿ ರುಚಿ ರುಚಿಯಾದ ಅಡುಗೆಗಳನ್ನು ಮಾಡಿ ಬಡಿಸುತ್ತಾರೆ. ಅಂತಹ ಅಡುಗೆ ಕೆಲಸದ ಕಾರ್ಮಿಕರಿಗೆ ಅವಗಢಸಂಭವಿಸಿದ್ದಲ್ಲಿ ಪರಿಹಾರ, ಪಿಂಚಣಿ ಸೌಲಭ್ಯವನ್ನು ಕಾರ್ಮಿಕ ಪರಿಷತ್‌ನಿಂದ ಒದಗಿಸಲಾಗುವುದು, ಗುರ್ತಿನ ಚೀಟಿಯನ್ನು ಸರಕಾರ ವಿತರಿಸುತ್ತಿದ್ದು, ಅದರ ಜೊತೆಗೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಅಗತ್ಯವಿದೆ. ಅಸಂಘಟಿತ ಕಾರ್ಮಿಕರ ಸಮ್ಮೇಳವನ್ನು ಹಮ್ಮಿಕೊಂಡು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು, ಇಎಸ್‌ಐ/ಪಿಎಫ್, ಕನಿಷ್ಟ ವೇತನ ನೀತಿ, ನಿಯಮ ರೂಪಿಸಲು ಸರಕಾರ ವಿಳಂಭ ನೀತಿ ಅನುಸರಿಸುತ್ತಿದೆ. ಸರಕಾರದ ವಿರುದ್ಧ ಹೋರಾಟವನ್ನು ರೂಪಿಸಲಾಗುವುದು.
ಕೋವಿಡ್‌ನಿಂದ ಅಡುಗೆಯವರು ಸಂಕಷ್ಟದಲ್ಲಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಅವರು ನಡೆಸಿದ ಹೋರಾಟದಿಂದ ಗುರ್ತಿನ ಚೀಟಿಯನ್ನು ನೀಡಿದ್ದಾರೆ. ಅಡುಗೆಯವರ ಕೌಶಲ್ಯ ಅಭಿವೃದ್ಧಿ ಮಾಡುವ ಕೇಂದ್ರಗಳನ್ನು ಪ್ರತಿ ಜಿಲ್ಲೆಯಲ್ಲಿ ತೆರೆದು ೪೦ ವರ್ಷದೊಳಗಿನವರಿಗೆ ಅಡುಗೆ ಮಾಡುವ ಬಗ್ಗೆ ತರಬೇತಿ ನೀಡಬೇಕು. ಸ್ವಯಂ ಉದ್ಯೋಗ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರಕಾರ ಸಾಲದ ಸೌಲಭ್ಯ ಕಲ್ಪಿಸುತ್ತಿದೆ. ಆದರೆ ಅಡುಗೆ ಕಾರ್ಮಿಕರಿಗೂ ಸಾಲದ ಸೌಲಭ್ಯ ವಿಸ್ತರಣೆ ಮಾಡುವಂತೆ ಒತ್ತಾಯಿಸಿದರು. ೧ ಲಕ್ಷ ವಸತಿ ಯೋಜನೆಯನ್ನು ಸರಕಾರ ಘೋಷಣೆ ಮಾಡಿದೆ. ರಾಜ್ಯ ಸರಕಾರ ಅಡುಗೆಯವರ ಅನುಕೂಲಕ್ಕಾಗಿ ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸುವಂತೆ ಒತ್ತಾಯಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ತಾ.ಅಧ್ಯಕ್ಷ ಎಸ್.ವಿ.ಲೋಕೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ಅಡುಗೆ ಕೆಲಸದವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಅಡುಗೆ ಕೆಲಸಗಾರರ ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಯೂನಿಯನ್‌ನ ರಾಜ್ಯಾಧ್ಯಕ್ಷ ಹೆಚ್.ವಿ.ನಾಗರಾಜ್, ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು, ತಾಲೂಕು ಅಧ್ಯಕ್ಷ ವೈ.ಎಸ್.ಕೃಷ್ಣಮೂರ್ತಿ, ಆಹಾರ ಸುರಕ್ಷತಾಧಿಕಾರಿ ನಾಗರಾಜಸ್ವಾಮಿ, ನಂಜುಂಡಸ್ವಾಮಿ, ರಾಮಚಂದ್ರರಾವ್, ಶ್ಯಾಮ್ ಕುಮಾರ್, ಶ್ರೀನಿವಾಸ ರಾವ್, ಪರಮೇಶ್, ಚನ್ನಯ್ಯ, ಬಾಲಾಜಿ ಸಿಂಗ್, ಶ್ರೀರಾಮ್, ಉಮೇಶ್, ಗೋಪಾಲರಾವ್, ಶ್ರೀನಿವಾಸಮೂರ್ತಿ, ಚನ್ನಕೇಶವ, ದೇವಿ ಪ್ರಸಾದ್, ನಾಗರಾಜ್, ನಾರಾಯಣ ಮೂರ್ತಿ, ವೆಂಕಟೇಶ್, ಇನ್ನಿತರರು ಇದ್ದರು.