ಅಡುಗೆ ಅನಿಲ ೫೦, ವಾಣಿಜ್ಯ ಸಿಲಿಂಡರ್ ೩೫೦ ರೂ. ದುಬಾರಿ

ಗ್ರಾಹಕರಿಗೆ ಶಾಕ್

ನವದೆಹಲಿ, ಮಾ. ೧- ಈಗಾಗಲೇ ಅಗತ್ಯ ವಸ್ತುಗಳ ದರ ಏರಿಕೆಯಿಂದ ಹೈರಾಣರಾಗಿರುವ ಗ್ರಾಹಕರಿಗೆ ಅಡುಗೆ ಅನಿಲ ಸಿಲಿಂಡರ್ ದರ ೫೦ ರೂ. ಗೆ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ೩೫೦ ರೂಪಾಯಿಗಳಿಗೆ ಹೆಚ್ಚಳ ಮಾಡಿ ತೈಲ ಕಂಪನಿಗಳು ಶಾಕ್ ನೀಡಿವೆ. ಪರಿಷ್ಕೃತ ದರಗಳು ತಕ್ಷಣ ಜಾರಿಗೆ ಬರಲಿವೆ.
೧೪ ಕೆಜಿ ತೂಕದ ಪ್ರತಿ ಸಿಲಿಂಡರ್ ದರ ೫೦ ರೂ. ಹೆಚ್ಚಳ ಮಾಡಿ, ಮಾರ್ಚ್ ತಿಂಗಳ ಆರಂಭದಲ್ಲೇ ಮಹಿಳೆಯರಿಗೆ ಆಘಾತ ನೀಡಿದೆ. ಈ ದರ ಏರಿಕೆಯಿಂದಾಗಿ ಪ್ರತಿ ಅಡುಗೆ ಅನಿಲ ಸಿಲಿಂಡರ್ ದರ ೧೧೦೦ ರೂ.ಗೆ ಏರಿಕೆಯಾಗಿದೆ.ಅದೇ ರೀತಿ ೧೯.೪ ಕೆ.ಜಿ. ತೂಕದ ವಾಣಿಜ್ಯ ಸಿಲಿಂಡರ್ ದರ ೩೫೦ ರೂ.ಗೆ ದುಬಾರಿಯಾಗಿದೆ. ಇದರಿಂದಾಗಿ ವಾಣಿಜ್ಯ ಸಿಲಿಂಡರ್ ಗಳ ದರ ೨೧೧೯ ರೂ. ಗಳಷ್ಟಿವೆ.
ಈ ವರ್ಷದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ೨ನೇ ಬಾರಿ ಏರಿಕೆ ಮಾಡಲಾಗಿದೆ. ಈ ಹಿಂದೆ ಜನವರಿ ೧ ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಅನ್ನು ದರವನ್ನು ೨೫ ರೂ. ಹೆಚ್ಚಳ ಮಾಡಲಾಗಿತ್ತು. ಈಗ ೩೫೦ ರೂ.ಗಳಷ್ಟು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿರುವುದರಿಂದ ರೆಸ್ಟೋರೆಂಟ್ ಗಳು, ಹೋಟೆಲ್‌ಗಳು ಸೇರಿದಂತೆ ವಾಣಿಜ್ಯೋದ್ಯಮಿಗಳಿಗೆ ಬೆಲೆಯೇರಿಕೆ ಬಿಸಿ ತಟ್ಟಲಿದೆ. ದರ ಏರಿಕೆಯಿಂದಾಗಿ ಹೋಟೆಲ್‌ಗಳಲ್ಲಿನ ತಿಂಡಿತಿನಿಸು ದರಗಳು ಇನ್ನಷ್ಟು ದುಬಾರಿಯಾಗಲಿವೆ.
ಸೆಪ್ಟೆಂಬರ್ ೧ ರಂದು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ೯೧.೫೦ ಪೈಸೆಯಷ್ಟು ಇಳಿಕೆ ಮಾಡಿದ್ದವು.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಇಂಧನ ಬೆಲೆ ಏರಿಳಿತ ಗಮನಿಸಿ ವಾಣಿಜ್ಯ ಮತ್ತು ಅಡುಗೆ ಅನಿಲ ಸಿಲಿಂಡರ್‌ಗಳ ಪರಿಷ್ಕರಣೆ ಮಾಡಲಾಗುತ್ತವೆ.

ಎಲ್‌ಪಿಜಿ ದರ ಎಲ್ಲೆಲ್ಲಿ ಎಷ್ಟೆಷ್ಟು

 • ದೆಹಲಿ :೧,೧೦೩ ರೂ
 • ಕೋಲ್ಕತ್ತಾ: ೧,೦೭೯ ರೂ
 • ಮುಂಬೈ: ೧,೦೫೨.೫೦ ರೂ
 • ಬೆಂಗಳೂರು : ೧,೦೫೫ ರೂ
 • ಚೆನ್ನೈ೧,೦೬೮.೫೦ ರೂ.
 • ಗುರುಗ್ರಾಮ : ೧,೦೬೧.೫೦ ರೂ
 • ನೋಯ್ಡಾ : ೧,೦೫೦.೫೦ ರೂ
 • ಚಂಡೀಗಢ,ಹೈದರಾಬಾದ್, ಜೈಪುರ : ೧,೦೫೬.೫೦ ರೂ
 • ಲಕ್ನೋ : ೧,೦೯೦.೫೦ ರೂ
 • ಪಾಟ್ನಾ: ೧,೨೦೧ ರೂ
 • ತಿರುವನಂತಪುರಂ: ೧,೦೬೨ ರೂಪಾಯಿ