
ವಿಜಯಪುರ:ಮಾ.4: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳು ಜನವಿರೋಧಿ ನೀತಿ, ಅಡುಗೆ ಅನಿಲ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಗೆ ಆರ್ಥಿಕ ಹೊರೆಯನ್ನುಂಟು ಮಾಡಿವೆ. ಡಬಲ್ ಎಂಜಿನ್ ಸರಕಾರವೆಂದು ಹೇಳಿ ರಾಜ್ಯದ ಅಭಿವೃದ್ಧಿಯನ್ನೇ ಮರೆತು ಧರ್ಮದ ಆಧಾರದ ಮೇಲೆ ಚುನಾವಣೆಗೆ ಹೊರಟಿರುವ ಬಿಜೆಪಿ ಪಕ್ಷದ ನಡೆಯನ್ನು ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿಯು ಬಲವಾಗಿ ಖಂಡಿಸಿತು. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕುಸಿದರೂ ಅಡುಗೆ ಅನಿಲದಂತಹ ಬೆಲೆಯನ್ನು ಹಾಗೂ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಗಳನ್ನು ಮೇಲಿಂದ ಮೇಲೆ ಏರಿಕೆ ಮಾಡುತ್ತಾ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡುತ್ತಿದೆ. ಕೂಡಲೇ ಘನವೆತ್ತ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಣ್ಣು ತೆರೆಸುವ ಕೆಲಸವನ್ನು ಮಾಡಿ ಏರಿಕೆಯಾದ ಬೆಲೆಗಳನ್ನು ತಕ್ಷಣವೇ ಇಳಿಕೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಕೊಳ್ಳಬೇಕೆಂದು ಪ್ರತಿಭಟನೆ ನಡೆಸಿ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಘನವೆತ್ತ ರಾಷ್ಟ್ರಪತಿಗಳಿಗೆ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿಯು ಮನವಿ ಅರ್ಪಿಸಿತು.
ಪ್ರತಿಭಟನೆಯನ್ನುದ್ದೇಶಿಸಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ, ಜಿಲ್ಲಾ ಉಪಾಧ್ಯಕ್ಷರಾದ ವೈಜನಾಥ ಕರ್ಪೂರಮಠ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಮಹಾನಗರಪಾಲಿಕೆ ಮಾಜಿ ಸದಸ್ಯ ಅಬ್ದುಲ್‍ರಜಾಕ ಹೊರ್ತಿ, ಜಿ.ಪಂ. ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಸುರೇಶ ಗೊಣಸಗಿ ಮುಂತಾದವರು ಮಾತನಾಡಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಅಪ್ಜಲ್ ಜಾನವೇಕರ, ನಗರ ಬ್ಲಾಕ್ ಅಧ್ಯಕ್ಷ ಜಮೀರಅಹ್ಮದ ಬಕ್ಷಿ, ಶಾಹಜಾ ಮುಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಬ್ಬೀರ ಜಾಗೀರದಾರ, ವಸಂತ ಹೊನಮೊಡೆ, ಸಾಹೇಬಗೌಡ ಬಿರಾದಾರ, ವಿಜಯಕುಮಾರ ಘಾಟಗೆ, ಅಸ್ಫಾಕ ಮನಗೂಳಿ, ಸಲೀಮ ಪೀರಜಾದೆ, ಚನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ಶರಣಪ್ಪ ಯಕ್ಕುಂಡಿ, ಮೈನುದ್ದೀನ ಬೀಳಗಿ, ಅಂಗ ಘಟಕಗಳ ಅಧ್ಯಕ್ಷರಾದ ಅಮಿತ ಚವ್ಹಾಣ, ಮಹ್ಮದಹನೀಫ ಮಕಾನದಾರ, ಪಯಾಜ ಕಲಾದಗಿ, ಜಯಶ್ರೀ ಭಾರತೆ, ದೀಪಾ ಕುಂಬಾರ, ಗಂಗೂಬಾಯಿ ಧುಮಾಳೆ, ಆಯೇಶಾ ಬೇಪಾರಿ, ಮಹಾನಗರಪಾಲಿಕೆ ಸದಸ್ಯರಾದ ಜಮೀರಅಹ್ಮದ ಬಾಂಗಿ, ದಿನೇಶ ಹಳ್ಳಿ, ಅಪ್ಪು ಪೂಜಾರಿ, ಶಬ್ಬೀರ ಮನಗೂಳಿ, ಆಸೀಫ್ ಶಾನವಾಲೆ, ಇಲಿಯಾಸ ಸಿದ್ದಿಕಿ, ಇರ್ಫಾನ ಶೇಖ, ಸದ್ದಾಮ ಇನಾಮದಾರ, ಅಕ್ರಮ ಮಾಶಾಳಕರ, ಧನರಾಜ ಎ., ಸದ್ದಾಮ ಇನಾಮದಾರ, ಶಬ್ಬೀರ ಪಾಟೀಲ, ಗೌಸ್ ಮುಜಾವರ, ಕೆ.ಎಸ್. ಪಾರಶೆಟ್ಟಿ, ಹಾಜಿ ಪಿಂಜಾರ, ಹಾಸಿಂಪೀರ ಪಟೇಲ, ಪೀರಾ ಜಮಖಂಡಿ, ತಾಜುದ್ದೀನ ಖಲೀಫಾ, ಬಾಬುಸಾಬ ಯಾಳವಾರ, ಎಂ.ಎ. ಬಕ್ಷಿ, ಗಿರೀಶ ಇಟ್ಟಂಗಿ, ಮಾದೇವ ಜಾಧವ, ನಾಗೇಶ ತಾಳಿಕೋಟಿ, ಭೀಮಪ್ಪಾ ಗೂಗದಡ್ಡಿ, ಪ್ರಣವ ಕುರ್ಲೆ, ಮೊಹಮ್ಮದ ಮುಲ್ಲಾ, ಮುತ್ತಣ್ಣ ಭೋವಿ, ಶರಣು ದೊಡ್ಡಮನಿ, ಆರ್.ಎಚ್. ನಾಯಕ, ಐ. ಆರ್. ಬಕ್ಷಿ, ಫಿದಾ ಕಲಾದಗಿ, ಅರ್ಜುನ ಕಾಳೆ, ಈರಪ್ಪ ಕುಂಬಾರ ಮುಂತಾದವರು ಉಪಸ್ಥಿತರಿದ್ದರು.