ಅಡುಗೆ ಅನಿಲ ಪ್ರತಿ ಸಿಲಿಂಡರ್ ಗೆ 200 ರೂ ಕಡಿತ: ಗ್ರಾಹಕರಿಗೆ ಕೇ‌ಂದ್ರದ ಬಂಪರ್

ನವದೆಹಲಿ,ಆ.29- ಅಡುಗೆ ಅನಿಲ ಸಿಲಿಡಂರ್‌ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 200 ರೂಪಾಯಿ ಕಡಿತ ಮಾಡಿ ಕೇಂದ್ರ ಸರ್ಕಾರ ಇಂದು ಪ್ರಕಟಿಸಿವೆ.‌ಗ್ರಾಹಕರಿಗೆ ಬಂಪರ್ ಕೊಡುಗೆ ಪ್ರಕಟಿಸಿದೆ.

ಉಜ್ವಲ ಯೋಜನೆಯಡಿ ಹೆಚ್ಚುವರಿ ಸಬ್ಸಿಡಿ ನೀಡಲು ಸಂಪುಟ ಅನುಮೋದನೆ ನೀಡಿದೆ. ಹೆಚ್ಚುವರಿ ಸಹಾಯಧನ ಪ್ರತಿ ಸಿಲಿಂಡರ್ ಗೆ 200 ರೂಪಾಯಿ ದರ ಕಡಿತ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಸಭೆಯ ನಿರ್ಧಾರಗಳನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಎಲ್ಲಾ ಗೃಹಬಳಕೆಯ ಗ್ರಾಹಕರಿಗೆ ಪ್ರತಿ ಸಿಲಿಂಡರ್‌ಗೆ 200 ಅಡುಗೆ ಅನಿಲದ ಬೆಲೆಯನ್ನು ಕಡಿತಗೊಳಿಸಿದೆ. ‌ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ 400 ಸಬ್ಸಿಡಿ ಕಡಿತ ಮಾಡಲಾಗಿದೆ ಎಂದು ಹೇಳಿದ್ದಾರೆ.

‌ನವದೆಹಲಿಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1,103 ರೂಪಾಯಿ ಇದ್ದು ಇಂದಿನಿಂದಲೇ 903 ರೂ ಕಡಿತವಾಗಲಿದೆ. ಅದೇ ರೀತಿ ಉಜ್ವಲ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್ ಸಬ್ಸಿಡಿಗೆ 200 ಕಡಿಮೆ ಮಾಡಿದ ಹಿನ್ನೆಲೆಯಲ್ಲಿ ಪ್ರತಿ ಸಿಲಿಂಡರ್ ಬೆಲೆ 703 ರೂಪಾಯಿ ಇರಲಿದೆ ಎಂದು ತಿಳಿಸಿದ್ದಾರೆ.

“ಪ್ರಧಾನಿ ಮೋದಿ ಅವರು ಎಲ್ಲಾ ಬಳಕೆದಾರರಿಗೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಮೇಲೆ 200 ಕಡಿತ ಮಾಡಲು ನಿರ್ಧರಿಸಿದ್ದಾರೆ.
ರಕ್ಷಾ ಬಂಧನ ಮತ್ತು ಓಣಂ ಸಂದರ್ಭದಲ್ಲಿ ದೇಶದ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಉಡುಗೊರೆಯಾಗಿದೆ” ಎಂದು ತಿಳಿಸಿದ್ದಾರೆ.

2014 ರಲ್ಲಿ, ಮೊದಲು ಅಧಿಕಾರಕ್ಕೆ ಬಂದಾಗ, ಕೇವಲ 14.5 ಕೋಟಿ ನಾಗರಿಕರು ಮಾತ್ರ ದೇಶೀಯ ಎಲ್‌ಪಿಜಿ ಸಂಪರ್ಕ ಹೊಂದಿದ್ದರು.ಈಗ ಆ ಸಂಖ್ಯೆ 33 ಕೋಟಿಗೆ ಏರಿಕೆಯಾಗಿದ್ದು, ಉಜ್ವಲ ಯೋಜನೆಯಡಿ 9.6 ಕೋಟಿ ವಿತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಉಡುಗೊರೆ:

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಅಡುಗೆ ಅನಿಲದ ಬೆಲೆ ಕಡಿತಗೊಳಿಸಿದ ನಿರ್ಧಾರಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು” ಎಂದು ಹೇಳಿದ್ದಾರೆ.

ಉಜ್ವಲಾ ಫಲಾನುಭವಿಗಳು 700 ಕ್ಕೆ ಎಲ್‌ಪಿಜಿ ಪಡೆಯುತ್ತಾರೆ ಮತ್ತು ಇತರ ಎಲ್ಲ ಗ್ರಾಹಕರು ಪ್ರತಿ ಸಿಲಿಂಡರ್ ಬೆಲೆ 900 ಕ್ಕೆ ಎಲ್‌ಪಿಜಿ ಪಡೆಯುತ್ತಾರೆ. ರಕ್ಷಾ ಬಂಧನದ ಶುಭ ಸಂದರ್ಭದಲ್ಲಿ ಸ್ತ್ರೀಶಕ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಉಡುಗೊರೆ.
ದೇಶಾದ್ಯಂತ 33 ಕೋಟಿ ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ‌

ಬಾಕ್ಸ್

ಉಚಿತ ಗ್ಯಾಸ್ ಸಂಪರ್

ರಕ್ಷಾ ಬಂಧನ ಮತ್ತು ಓಣಂ ಸಂದರ್ಭದಲ್ಲಿ ಉಜ್ವಲ ಯೋಜನೆಯಡಿ 75 ಲಕ್ಷ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಅನುರಾಗ್ ಸಿಂಗ್ ಠಾಕೂರು ಹೇಳಿದ್ದಾರೆ‌

ಉಪಕ್ರಮದ ಅಡಿಯಲ್ಲಿ, ಈ ಮಹಿಳೆಯರು ಗ್ಯಾಸ್ ಬರ್ನರ್, ಮೊದಲ ಅಡುಗೆ ಅನಿಲ ಸಿಲಿಂಡರ್ ಮತ್ತು ಪೈಪ್ ಅನ್ನು ಉಚಿತವಾಗಿ ಪಡೆಯುತ್ತಾರೆ ಎಂದು ಠಾಕೂರ್ ಹೇಳಿದ್ದಾರೆ.

75 ಲಕ್ಷ ಮಹಿಳೆಯರು ಗ್ಯಾಸ್ ಸಂಪರ್ಕ ಪಡೆದ ನಂತರ ಉಜ್ವಲ ಯೋಜನೆಯ ಒಟ್ಟು ಫಲಾನುಭವಿಗಳ ಸಂಖ್ಯೆ 35 ಕೋಟಿ ಗೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.