
ಕಲಬುರಗಿ,ಮಾ 4: ಗ್ಯಾಸ್ ಸಿಲಿಂಡರ್‍ಗಳ ಬೆಲೆಯೇರಿಕೆ ಖಂಡಿಸಿ ಇಂದು ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದಿಂದ ನಗರದಎಸ್.ವಿ.ಪಿ. ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಕಲಬುರಗಿ ಜಿಲ್ಲಾ
ಸಮಿತಿ ಸದಸ್ಯ ಎಸ್.ಎಮ್. ಶರ್ಮಾ ಮಾತನಾಡಿ, ಗೃಹಬಳಕೆಯ ಅನಿಲ ಸಿಲಿಂಡರ್ ಮೇಲೆ ರೂ.50 ದರ ಹೆಚ್ಚಳದ ಹೇರಿಕೆಯನ್ನು ಕಟುವಾಗಿ ಖಂಡಿಸಿದರು.ಪಕ್ಷದ ಜಿಲ್ಲಾ ಸಮಿತಿಯ ಸದಸ್ಯ ವಿ.ಜಿ.ದೇಸಾಯಿ ಮಾತನಾಡಿಕೇಂದ್ರ ಸರ್ಕಾರವು ಬಡವರಿಗೆ ಉಜ್ವಲ ಯೋಜನೆಯಡಿ ಉಚಿತವಾಗಿ ಅನಿಲಸಂಪರ್ಕ ನೀಡಲಾಗಿದೆ ಎಂದು ಕೊಚ್ಚಿಕೊಳ್ಳುತ್ತಾರೆ.ಆದರೆ ಈಉಜ್ವಲ ಫಲಾನುಭವಿಗಳು ಕೂಡ ಸಿಲಿಂಡರಿಗೆ ಇದೇ ಮಾರುಕಟ್ಟೆ ದರವನ್ನು ಕೊಟ್ಟುಖರೀದಿಸಬೇಕು ಎಂಬುದನ್ನು ಜಾಣ್ಮೆಯಿಂದ ಮರೆಮಾಚುತ್ತಾರೆ ಎಂದರು.ಪಕ್ಷದ ಜಿಲ್ಲಾ ಸಮಿತಿಯ ಸದಸ್ಯ ಮಹೇಶ ಎಸ್.ಬಿ, ಗಣಪತ್‍ರಾವ್ ಕೆ. ಮಾನೆ,ಜಿಲ್ಲಾಕಾರ್ಯದರ್ಶಿ ಎಚ್.ವಿ.ದಿವಾಕರ್, ಜಿಲ್ಲಾ ನಾಯಕರಾದ ವಿ.ನಾಗಮ್ಮಾಳ್‍ಮಾತನಾಡಿದರು. ಪ್ರತಿಭಟನೆಯಲ್ಲಿರಾಮಣ್ಣ ಎಸ್. ಇಬ್ರಾಹಿಂಪುರ, ಜಗನ್ನಾಥ ಎಸ್.ಎಚ್, ರಾಘವೇಂದ್ರ ಎಮ್.ಜಿ, ಸಂತೋಷ ಹಿರವೆ, ಗೌರಮ್ಮ, ರಾಧಾ, ಸ್ನೇಹಾಕಟ್ಟಿಮನಿ, ತುಳಜಾರಾಮ, ಅರುಣ ಹಿರೇಬಾನರ್, ಭೀಮು ಆಂದೋಲಾ, ನಾಗರಾಜ, ಪ್ರೀತಿದೊಡ್ಡಮನಿ ಹಾಗೂ ನಾಗರಿಕರು ಭಾಗವಹಿಸಿದರು.