
ಸಿರವಾರ,ಫೆ.೨೫- ತಾಲೂಕಿನ ಕಲ್ಲೂರು ಗ್ರಾಮದ ಶ್ರೀಗುರು ಅಡವೀಶ್ವರ ಶಿವಯೋಗಿಗಳ ೮೮ನೇ ಜಾತ್ರಾ ಮಹೋತ್ಸವ ಶುಕ್ರವಾರ ಅದ್ಧೂರಿಯಾಗಿ ನಡೆಯಿತು.
ಪೀಠಾಧೀಪತಿ ಶಂಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಜಾತ್ರೆ ನಿಮಿತ್ತ ಗ್ರಾಮದ ಮಾರಟೇಶ್ವರ ದೇವಸ್ಥಾನದಿಂದ ಅಡವೀಶ್ವರ ಮಠದ ವರೆಗೆ ಕುಂಭೋತ್ಸವ ಮೆರವಣಿಗೆ ನಾನಾ ವಾದ್ಯಗಳೊಂದಿಗೆ ನಡೆಯಿತು. ನಂತರ ಕಾಶಿವಿಶ್ವನಾಥ ಲಿಂಗಕ್ಕೆ ಅಭಿಷೇಕ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಜಂಭುನಾಥ ಯಾದವ್, ಶರಣಪ್ಪ ಮೇಟಿ, ಭೀಮರಾಯ ಶಿಕ್ಷಕರು, ತಾಯಪ್ಪ ಹೊಸೂರು, ಮಂದಕಲ್ ನಾಗಲಿಂಗ, ಶಿವಪ್ಪ ನಾಯಕ ಕಲ್ಲೂರು, ಶಿವುಕುಮಾರ್ ಶಿಕ್ಷಕರು, ಪಾಲಕ್ಷ, ಹನುಮೇಶ ಯಾದವ್, ಬಸನಗೌಡ ಪೋಲಿಸ್ ಪಾಟೀಲ್, ಶಂಕರಗೌಡ, ಹೇಮಣ್ಣ, ಅಂಬ್ರೇಶ ಸಾಹುಕಾರ್ ಹಾಗೂ ಗ್ರಾಮದ ಮುಖಂಡರು ಸೇರಿದಂತೆ ಸುತ್ತಮುತ್ತಲಿನ ಭಕ್ತಾದಿಗಳಿದ್ದರು.