ಅಡವಿ ಸಿದ್ದೇಶ್ವರರು ಭಕ್ತರ ಆಲದಮರ ನೆಟ್ಟಿದ್ದಾರೆ:ಅಂಕಲಿಶ್ರೀ

ತಾಳಿಕೋಟೆ:ಮಾ.27: ಅಡವಿ ಸಿದ್ದೇಶ್ವರ ಶ್ರೀಗಳ ಪರಂಪರೆಯನ್ನು ನೆನೆಸಿದರೆ ಅವರು ಎಲ್ಲೆಲ್ಲಿ ಹೋಗಿದ್ದಾರೆ ಅಲ್ಲಿ ಭಕ್ತರನ್ನು ಉದ್ದರಿಸುವ ಕಾರ್ಯ ಮಾಡಿದ್ದಾರಲ್ಲದೇ ಆಯಾ ಸ್ಥಳದಲ್ಲಿ ಅವರದೇ ಆದಂತಹ ಕುರುಹುಗಳನ್ನು ಕೊಟ್ಟು ಅನುಯಾಯಿಗಳನ್ನು ನೆಮಕ ಮಾಡಿ ಹೋಗಿದ್ದ ಅವರ ಕೀರ್ತಿ ಸದಾ ಅಜರಾಮರವಾಗಿ ಮುಂದುವರೆಯುತ್ತಾ ಸಾಗಿದೆ ಎಂದು ಅಂಕಲಿ ಶ್ರೀಮಠದ ಪ.ಪೂ.ಶ್ರೀ ವೀರಭದ್ರ ಮಹಾಸ್ವಾಮಿಗಳು ನುಡಿದರು.
ಮಂಗಳವಾರರಂದು ಸ್ಥಳೀಯ ಶ್ರೀ ಸಾಂಭ ಪ್ರಭು ಶರಣಮುತ್ಯಾರವರ ಜಾತ್ರೋತ್ಸವ ಕುರಿತು ಸಾಗಿ ಬಂದ ಪುರಾಣ ಪ್ರವಚನದ ಕಾರ್ಯಕ್ರಮದಲ್ಲಿ ಸುಮಂಗಲೆಯರ ಕುರಿತು ಏರ್ಪಡಿಸಲಾದ ಉಡಿ ತುಂಬುವ ಕಾರ್ಯಕ್ರಮ ಹಾಗೂ ಪರಸು ಬಟ್ಟಲು ವಿತರಿಸುವ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ವಹಿಸಿ ಆಶಿರ್ವಚನವಿತ್ತ ಶ್ರೀಗಳು ಅಡವಿ ಸಿದ್ದೇಶ್ವರ ಶ್ರೀಗಳಲ್ಲಿ ಇರತಕ್ಕಂತಹ ಶಕ್ತಿ ಎಂತಹದ್ದೆಂಬುದು ಇಂದು ಅವರ ಮಹಾ ಕಾರ್ಯಕ್ರಮದಲ್ಲಿ ಎಲ್ಲ ಜನಸ್ತೋಮವನ್ನು ನೋಡಿದರೆ ಅರ್ಥವಾಗುತ್ತದೆ ಅಂತಹ ಶಕ್ತಿ ನಿಮ್ಮೆಲ್ಲರಲ್ಲಿದೆ ಎಂದರು.
ಶ್ರೀಗಳ ಚಾರಿತ್ರ್ಯ ಮೌನಾಮೃತವಾಗಿರಬಹುದು ಅವರ ಸನ್ಮಾರ್ಗದಲ್ಲಿ ನಡೆದರೆ ಬೇಕು ಬೇಡಿಕೆಗಳು ಇಡೇರಲಿವೆ ಎಂದರು. ನಿರುಪಾದೀಶ್ವರರೂ ಕೂಡಾ ಶಿಷ್ಯರಾಗಿದ್ದರು ಅವರಂತೆ ನೀವೆಲ್ಲರೂ ಕೂಡಾ ಶಿಷ್ಯಂದೀರಾಗಿದ್ದೀರಿ ಅವರ ಇತಿಹಾಸ ಕೇಳಿದ್ದೀರಿ ಹೇಳಿದ್ದಕ್ಕೂ ಕೇಳಿದ್ದಕ್ಕೂ ಸಾರ್ಥಕತೆಯಾಗಲಿದೆ ಅವರ ಮಾರ್ಗದಲ್ಲಿ ನಡೆದ ನಿಮ್ಮೇಲ್ಲರ ಜೀವನ ಸಾರ್ಥಕತೆಯಾಗಲಿ ಎಂದ ಶ್ರೀಗಳು ನಿಮ್ಮೇಲ್ಲರನ್ನು ನೋಡಿದರೆ ಶ್ರೀಗಳು ಶ್ರೀಗಳು ನೆಟ್ಟ ಆಲದ ಮರದಂತೆ ಕಾಣುತ್ತೀರಿ ಅವರು ನೆಟ್ಟು ಹೋದ ಈ ಆದ್ಯಾತ್ಮ ಎಂಬ ಆಲದ ಮರ ಎಲ್ಲರಿಗೂ ನೆರಳು ಕೊಡುವ ಕ್ಷೇತ್ರವಾಗಲೆಂದು ಶ್ರೀಗಳು ಆಶಿರ್ವದಿಸಿದರು.
ವೇದಿಕೆಯ ಮೇಲೆ ಖ್ಯಾತ ಪುರಾಣ ಪ್ರವಚನಕಾರರಾದ ಮಸೂತಿಯ ಪೂಜ್ಯ ಶ್ರೀ ಡಾ.ಶಿವಲಿಂಗಯ್ಯ ಶರಣರು, ಬಸಣ್ಣಮುತ್ಯಾ ಶರಣರ, ಶರಣಪ್ಪಮುತ್ಯಾ ಶರಣರ, ಭಂಟನೂರಿನ ಶರಣೆ ಕಾಶಿಬಾಯಿ ಅಮ್ಮನವರು, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿದ್ದಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಶರಣಗೌಡ ಪೊಲೀಸ್‍ಪಾಟೀಲ, ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಶ್ರೀಮತಿ ಕಾಶಿಬಾಯಿ ಶರಣರ, ಭೋಗಣ್ಣ ಹೂಗಾರ, ನಿಂಗನಗೌಡ ಬಿರಾದಾರ, ಡಿ.ಕೆ.ಪಾಟೀಲ, ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ವಾಯಿಲಿನ್ ವಾದಕ ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.