ಅಡವಿ ದೇವಿ ಮಡ್ರಹಳ್ಳಿ ಚೌಡೇಶ್ವರಿ ಜಾತ್ರೆ

ಜಗಳೂರು.ಮಾ.೧೦ :-ಕೊಂಡುಕುರಿ ನಾಡಿನ ಹೃದಯಭಾಗದಲ್ಲಿ ರುವ ಮಡ್ರಹಳ್ಳಿ ಶಕ್ತಿ ದೇವತೆ  ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಲಿದ್ದು ಸಕಲ ಸಿದ್ದತೆ ನಡೆದಿದ್ದು ಕ್ಷಣಗಣನೆ ಉಳಿದೆ.ಇಂದು   ರಥೋತ್ಸವಕ್ಕೆ ಸಜ್ಜುಗೊಳಿಸಿದ್ದು.ದೇವಿ ಸನ್ನಿಧಾನದಲ್ಲಿ ಪಾಳ್ಯೆ ಹಾಕಿಕೊಂಡು ಪೂಜಾ ಕೈಂಕರ್ಯ ಗಳನ್ನು ನೆರವೇರಿಸಲು ಭಕ್ತಾದಿಗಳಿಗೆ ತಂಗಲು ಸ್ಥಳಾವಕಾಶ,ನೀರಿನ ಸೌಕರ್ಯ,ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಪೂರೈಕೆ,ಆರೋಗ್ಯ ಚಿಕಿತ್ಸೆ, ಅಂಬ್ಯುಲೆನ್ಸ್,ತುರ್ತು ಅಗ್ನಿಶಾಮಕದಳ ವಾಹನ,ಪೊಲೀಸ್ ಬಿಗಿ ಬಂದೋಬಸ್ತ್ ,ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ತಾಲೂಕು ಆಡಳಿತ ಹಾಗೂ ಚೌಡೇಶ್ವರಿ ದೇವಸ್ಥಾನ ಅಭಿವೃದ್ದಿ ಸಮಿತಿ ನಿರ್ವಹಿಸಲಿದೆ. ಜಗಳೂರು ತಾಲೂಕಿನ ಭಕ್ತರನ್ನು ಹೊರತುಪಡಿಸಿ  ಕೊಟ್ಟೂರು,ಕೂಡ್ಲಿಗಿ,ಹರಪನಹಳ್ಳಿ,ಚಳ್ಳಕೆರೆ,ದಾವಣಗೆರೆ ಚಿತ್ರದುರ್ಗ ಸೇರಿದಂತೆ ವಿವಿಧ ತಾಲೂಕಿನಲ್ಲಿ ಅಪಾರ ಪ್ರಮಾಣದ ಭಕ್ತಸಮೂಹ ಶಕ್ತಿ ದೇವತೆ ಚೌಡಮ್ಮ ದೇವಿ ಕೃಪೆಯಲ್ಲಿದ್ದಾರೆ.ಪ್ರತಿ ವರ್ಷದ ರಥೋತ್ಸವ ಹಾಗೂ ಜಾತ್ರಾಮಹೋತ್ಸವದ ನಂತರ ಪ್ರತಿ ಮಂಗಳವಾರ,ಶುಕ್ರವಾರದಂದು ಆಗಮಿಸಿ ಭಕ್ತಿ ಸಮರ್ಪಿಸುವುದು ಸರ್ವೆ ಸಾಮಾನ್ಯವಾಗಿರುತ್ತದೆ. ರಥೋತ್ಸವಕ್ಕೆ ಆಗಮಿಸುವ‌ ಹಾಗೂ ಪಾಳ್ಯ ಹಾಕುವ ಭಕ್ತರು ಬೈಕ್,ಟ್ರ್ಯಾಕ್ಟರ್,ಎತ್ತಿನ ಬಂಡಿಯಲ್ಲಿ ಆಗಮಿಸುವವರು ತಮ್ಮ ಗ್ರಾಮಗಳಿಂದ ಆಗಮಿಸುವಾಗ ದೇವಿ ಸನ್ನಿಧಿ ತಲುಪುವ ವರೆಗೂ ಚೌಡೇಶ್ವರಿ ನಿನ್ನ ಆಲಕ್ಕೆ ಉಧೋ ಉಧೋ ಎಂಬ ಭಕ್ತಿ  ಜೈಂಕಾರದ ಘೋಷಣೆಗಳು ಮೈ ರೋಮಾಂಚನ ಗೊಳಿಸುತ್ತವೆ. ಮಡ್ರಳ್ಳಿ ಶ್ರೀದೇವಿ ಚೌಡೇಶ್ವರಿ ದೇವಿಗೆ ಭಕ್ತಿ ಸಮರ್ಪಿಸಿದರೆ.ದೇವಸ್ಥಾನದ ಗರ್ಭಗುಡಿಯ ಹೊರಭಾಗ ದಲ್ಲಿರುವ ತೊಟ್ಟಿಲಿಗೆ ಪೂಜೆ ನಡೆಸಿ ಹರಕೆ ಹೊತ್ತುಕೊಂಡರೆ ಮಕ್ಕಳಿಲ್ಲದವರಿಗೆ ಸಂತಾನಪ್ರಾಪ್ತಿಯಾಗುವುದು.ಅಲ್ಲದೆ ಬೇಸಿಗೆ ಸಮಯದಲ್ಲಿ ಸಿಡುಬು,ದಢಾರದಂತಹ ಮಾರಕ ಕಾಯಿಲೆಗಳು ವಾಸಿಯಾಗುವ ಪ್ರತೀತಿ ಇಲ್ಲಿದೆ. ಗ್ರಾಮೀಣ ಭಾಗದ ಭಕ್ತರು ಇಲ್ಲಿ ಯಾವುದೇ ಸಿಡಿ ಹಾಕು ವುದು, ಮುತ್ತು ಕಟ್ಟಿಸುವುದು ಮತ್ತು ದೇವದಾಸಿ ಪದ್ದತಿ,ಇತರೆ ಮೂಢನಂಬಿಕೆಗಳನ್ನು ಆಚರಿಸದೆ ಭಕ್ತಿ‌ ಪರ್ವ ಹರಿಸಿ,ತಮ್ಮ ಕಾಣಿಕೆ ಪೂಜಾ ಸಂಪ್ರದಾಯಗಳ ಹರಕೆ ತೀರಿಸುತ್ತಾರೆ. ಶಾಸಕ ಎಸ್. ವಿ ರಾಮಚಂದ್ರ, ತಹಶೀಲ್ದಾರ್ ಸಂತೋಷ್ ಕುಮಾರ್ ಜಿ. ಮಾಜಿ ಶಾಸಕ ಎಚ್ ಪಿ ರಾಜೇಶ್. ಕೆಪಿಸಿಸಿ ಎಸ್. ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ. ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಟ್ಟಿ  ಬಿ ದೇವೇಂದ್ರಪ್ಪ, ಗುರುಸಿದ್ಧಾಪುರ ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಗ್ರಾಮಸ್ಥರು ವಿವಿಧ ನಾಯಕರುಗಳು ಮತ್ತು ತಾಲೂಕು ಮಟ್ಟದ  ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು  ಮತ್ತು ಭಕ್ತಾದಿಗಳು ಆಗಮಿಸಿ ಶ್ರೀ ಮಡ್ಡಳ್ಳಿ ಚೌಡೇಶ್ವರಿ ದೇವಿಯ ಆಶೀರ್ವಾದ ಪಡೆದು ರಥೋತ್ಸವ ನೆರವೇರಲಿದೆ .