ಅಡಕೆ ತೋಟದಲ್ಲಿ 7 ಅಡಿ ಉದ್ದದ ಹೆಬ್ಬಾವು!

ಶಿವಮೊಗ್ಗ, ಸೆ. 14: ಶಿವಮೊಗ್ಗ ತಾಲೂಕಿನ ಗಾಜನೂರು ಗ್ರಾಮದ ಸಮೀಪದ ಅಡಕೆ ತೋಟವೊಂದರಲ್ಲಿ, ಬುಧವಾರ ಬೃಹದಾಕಾರದ ಹೆಬ್ಬಾವನ್ನು ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು ಸಂರಕ್ಷಿಸಿದ ಘಟನೆ ನಡೆದಿದೆ.ತೋಟದಲ್ಲಿ ಕಳೆ ಕೀಳುವ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹೆಬ್ಬಾವು ಗಮನಿಸಿದ್ದಾರೆ. ತಕ್ಷಣವೇ ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ರವಾನಿಸಿದ್ದರು.ಹೆಬ್ಬಾವು ಸುಮಾರು 7 ಅಡಿ ಉದ್ದವಿದೆ. ಅರಣ್ಯ ಇಲಾಖೆ ಅಧಿಕಾರಿ-ಸಿಬ್ಬಂದಿಗಳ ಸಮ್ಮುಖದಲ್ಲಿ ಹಾವನ್ನು ಕಾಡಿಗೆ ಬಿಡಲಾಗುವುದು ಎಂದು ಸ್ನೇಕ್ ಕಿರಣ್ ಅವರು ತಿಳಿಸಿದ್ದಾರೆ.