ಅಟೋ ಚಾಲಕನ ಮೇಲೆ ಹಲ್ಲೆ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

ವಿಜಯಪುರ, ಮಾ.31-ವಿವಿಧ ದಲಿತ ಸಂಘಟನೆಗಳ ಒಕ್ಕೂಟದಿಂದ ರಾಜು ಬಾಲಪ್ಪ ಮಾದರ ಬಡ ದಲಿತ ಅಟೋ ಚಾಲಕನ ಮೇಲೆ ಹಲ್ಲೆ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರಮೇಶ ಆಸಂಗಿ ಡಿ.ಎಸ್.ಎಸ್. ರಾಜ್ಯ ಸಂಘಟನಾ ಸಂಚಾಲಕರು ಮಾತನಾಡಿ ಕೊಲ್ಹಾರ ತಾಲೂಕಿನ ಕೂಡಗಿ ಎನ್.ಟಿ.ಪಿ.ಸಿ. ಪೋಲಿಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಬುದ್ನಿಕ್ರಾಸ್ ಹತ್ತಿರ ರಾಜು ಬಾಲಪ್ಪ ಮಾದರ ಬಡ ದಲಿತ ಮಾದಿಗ ಸಮಾಜದ ಅಟೋ ಚಾಲಕನಾಗಿದ್ದು ಈತನು ಪ್ರತಿ ದಿನ ಕೆಲಸದ ಆಳುಗಳನ್ನು ಬುದ್ನಿಯಿಂದ ಮಸೂತಿಗೆ ಕರೆದುಕೊಂಡು ಹೋಗುವುದು ಮತ್ತು ಕರೆದುಕೊಂಡು ಬರುವದು ಈತನ ಉದ್ಯೋಗವಾಗಿತ್ತು. ಈತನ ಮೇಲೆ ದಿನಾಂಕ 23-3-2021 ರಂದು ಬುದ್ನಿ ಗ್ರಾಮದ ಮೇಲ್ವರ್ಗದ ಜಾತಿಯವರಾದ ಸುಮಾರು 9-15 ಜನ ಕೂಡಿಕೊಂಡು ಮನ ಬಂದಂತೆ ರಾಡು ಮತ್ತು ಕಲ್ಲಿನಿಂದ ಒಳಪೆಟ್ಟು ಆಗುವ ಹಾಗೆ ಮನಸ್ಸಿಚ್ಚೆಯಿಂದ ಥಳಿಸಿ ಪ್ರಜ್ಞಾಹಿನನಾಗಿದ್ದಾಗ ಅವರು ಬಿಟ್ಟು ಓಡಿ ಹೋದರು.
ಅವನನ್ನು ಅವರ ಮಾನವನರು ಪ್ರಥಮ ಚಿಕಿತ್ಸೆಗಾಗಿ ಬಸವನಬಾಗೇವಾಡಿ ಸರಕಾರಿ ಆಸ್ಪತ್ರೆಯಲ್ಲಿ ಎಂ.ಎಲ್.ಸಿ. ಮಾಡಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಚಿಕಿತ್ಸೆ ಪಡೆಯುತ್ತಿರುವ ಗುಣಮುಖವಾಗಿದೆ. ಇದ್ದರೂ ಕೂಡಾ ರಾಜಕೀಯ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಿ ಆಸ್ಪತ್ರೆಯ ವೈದ್ಯರು ನಿರ್ಲಕ್ಷ ತೋರುತ್ತಿದ್ದು ಅದಲ್ಲದೆ ಅವನಿಗೆ ಡಿಸ್ಟಾರ್ಜ್ ಆಗಿ ಇವತ್ತೆ ಹೋಗುಬೇಕೆಂದು ಒತ್ತಾಯವನ್ನು ಮಾಡುತ್ತಿದ್ದಾರೆ. ಇದನ್ನು ತಾವು ಗಂಭೀರವಾಗಿ ಪರಿಗಣಿಸಿ ಹಲ್ಲೆಗೊಳಲಾದ ವ್ಯಕ್ತಿಯು ಸಂಪೂರ್ನವಾಗಿ ಗುಣಮುಖವಾಗುವವರೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಬೇಕಾಗಿ ತಮ್ಮಲ್ಲಿ ಕೋರುತ್ತೇವೆ.
ಜಿಲ್ಲಾ ಜಾಗ್ರತÀ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಅರವಿಂದ ಸಾಲವಾಡಗಿ ಮಾತನಾಡಿ ರಾಜು ಬಲಪ್ಪ ಮಾದರ ಈತನು ದಿನಾಂಕ 24-3-2021 ರಂದು ಎಫ್.ಐ.ಆರ್. ದಾಖಲು ಮಾಡಿಸಿದ ನಂತರ ಅಪರಾಧಿಯವರು ಪುನಃ ಅದೇ ಪೋಲಿಸ ಠಾಣೆಯಲ್ಲಿ ದಿನಾಂಕ 25-3-2021 ರಂದು ಒಬ್ಬ ಮಹಿಳೆಯನ್ನು ಎತ್ತಿ ಕಟ್ಟಿ ಅವಳಿಂದ ಕೌಂಟರ್ ಕೇಸ್ ಮಾಡಿಸಲು ಹಾಗೂ ರೇಪ್ ಮತ್ತು ಮಾನಬಂಗ ಅಂತ ಹೇಳಿ ಕೇಸನ್ನು ದಾಖಲು ಮಾಡಿಸಿದ್ದು ಇರುತ್ತದೆ. ಕಾರಣ ಈ ದೂರನ್ನು ಕುಲಂಕುಷವಾಗಿ ಪರಿಶೀಲಿಸಿ ಸೂಕ್ತವಾಧ ತನಿಖೆ ನಡೆಸಿ ಕಾನೂನಿನ ಪ್ರಕಾರ ನ್ಯಾಯ ಒದಗಿಸಬೇಕು.
ಈ ಸಂದರ್ಭದಲ್ಲಿ ಶ್ರೀಶೈಲ ರತ್ನಾಕರ, ಮದನಕುಮಾರ ನಾಡಗರದಿನ್ನಿ, ಶಿವಾನಂದ ಕುಮಸಿ, ಲಕ್ಷ್ಮಣ ಬ್ಯಾಲ್ಯಾಲ, ಲಕ್ಷ್ಮಣ ಮುಂದಿನಮನಿ, ರಮೇಶ ಚಲವಾದಿ, ರವಿ ಹಳ್ಳಿ, ಅನಿಲ ಕಾಂಬಳೆ, ಮಂಜುನಾಥ ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದರು.