ಅಟೆಂಡೆಂಟ್ ನೌಕರರನ್ನು ಕ್ಲಿನಿಕಲ್ ಸಹಾಯಕ್ಕೆ ಮಾತ್ರ ಬಳಸಲು ಮನವಿ

ಕೋಲಾರ, ಮೇ ೪: ಹಾಸ್ಪಿಟಲ್ ಅಟೆಂಡೆಂಟ್ ಗ್ರೇಡ್-೨ ನೌಕರರನ್ನು ಕ್ಲಿನಿಕಲ್ ಸಹಾಯಕ್ಕೆ ಮಾತ್ರ ಬಳಸಿಕೊಳ್ಳುವಂತೆ (ಓನ್ಲಿ ಫಾರ್ ಕ್ಲಿನಿಕಲ್ ಸಪೋರ್ಟ್) ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಬೇಕೆಂದು ಒತ್ತಾಯಿಸಿ ಹಾಸ್ಪಿಟಲ್ ಅಟೆಂಡೆಂಟ್ ಗ್ರೇಡ್-೨ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.
ಮಾನ್ಯ ನಿರ್ದೇಶಕರು ಮತ್ತು ಡಿ.ಹೆಚ್.ಓ ರವರು ಹಾಸ್ಪಿಟಲ್ ಅಟೆಂಡೆಂಟ್ ಗ್ರೇಡ್-೨ ನೌಕರರನ್ನು ಕ್ಲಿನಿಕಲ್ ಸಹಾಯಕ್ಕೆ ಮತ್ರ ಬಳಸಿಕೊಳ್ಳುವಂತೆ (ಓನ್ಲಿ ಫಾರ್ ಕ್ಲಿನಿಕಲ್ ಸಪೋರ್ಟ್) ಸ್ಪಷ್ಟವಾಗಿ ಆದೇಶವನ್ನು ನೀಡಿದ್ದರೂ ಸಹ ಜಿಲ್ಲೆಯಲ್ಲಿನ ಆರೋಗ್ಯಧಿಕಾರಿಗಳು ಮತ್ತು ಆಡಳಿತ ವೈದ್ಯಾಧಿಕಾರಿಗಳು ಮಾತ್ರ ಇವರನ್ನು ಕ್ಲಿನಿಕಲ್ ಮತ್ತು ನಾನ್ ಕ್ಲಿನಿಕಲ್ ಎರಡೂ ಕೆಲಸಗಳಿಗೆ ಬಳಸಕೊಂಡು ನಿರ್ದೆಶಕರು ಮತ್ತು ಡಿ.ಹೆಚ್.ಓ ರವರ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ ಎಂದು ಆರೋಪಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಇವರನ್ನು ಕ್ಲಿನಿಕಲ್ ಕಾರ್ಯಗಳಿಗೆ ಮಾತ್ರ ಬಳಸಿಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ನಿಯೋಗದಲ್ಲಿ ಗಿರೀಶ್ ಸೇರಿದಂತೆ ಹಾಸ್ಪಿಟಲ್ ಅಟೆಂಡೆಂಟ್ ಗ್ರೇಡ್-೨ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.