ಅಟಲ್ ಬಿಹಾರಿ ವಾಜಪೇಯಿ ಹಾಗೂ ಮೊಹಮ್ಮದ್ ರಫಿಯ ವರು ರಾಷ್ಟ್ರೀಯ ಭಾವೈಕ್ಯತೆಯ ಪ್ರತಿರೂಪ:ವೀರಭದ್ರಪ್ಪ ಉಪ್ಪಿನ

ಬೀದರ:ಡಿ.27:ಜಾತ್ಯಾತೀತ ತಳಹದಿಯ ಮೇಲೆ ದಕ್ಷ ಆಡಳಿತ ನಡೆಸಿದ್ದ ಭಾರತ ರತ್ನ ದಿ .ಅಟಲ್ ಬಿಹಾರಿ ವಾಜ ಪೇಯಿ ಹಾಗೂ ತಮ್ಮ ಮಧುರ ಕಂಠದಿಂದ ವಿಶ್ವದೆಲ್ಲೆಡೆ ಅಪಾರ ಕೀರ್ತಿ ಗಳಿಸಿದ್ದ ದಿ. ಮೊಹಮ್ಮದ್ ರಫಿ ಇಬ್ಬರೂ ರಾಷ್ಟ್ರೀಯ ಭಾವೈಕ್ಯತೆಯ ಸಂಕೇತ ವಾಗಿದ್ದರು ಎಂದು ಪಶು ವೈದ್ಯಕೀಯ ವಿವಿಯ ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ ರವರು ಅಭಿಪ್ರಾಯ ಪಟ್ಟರು. ಅವರು ಇಂದು ಬೀದರಿನ ಕಾರಂಜಾ ಹಿತರಕ್ಷಣಾ ಸಮಿತಿಯ ಅಹೋ ರಾತ್ರಿ ಧರಣಿಯ ಸ್ಥಳದಲ್ಲಿ ದಿವಂಗತ ವಾಜ ಪೇಯಿ ಹಾಗೂ ರಫಿ ಅವರ 99ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು.ಅಖಿಲ ಭಾರತ ವಿಶ್ವವಿದ್ಯಾಲಯ ಗಳ ನೌಕರರ ಒಕ್ಕೂಟ ಹಾಗೂ ಕಾರಂಜಾ ಮುಳುಗಡೆ ಸಂತ್ರ ಸ್ತರ ಹಿತರಕ್ಷಣ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ದಿವಂಗತ ವಾಜಪೇಯಿ ಹಾಗೂ ಮೊಮ್ಮದ್ ರಫಿ ಅವರ 99ನೇ ಜನ್ಮ ದಿನಾಚರಣೆಯನ್ನು ಏರ್ಪಡಿಸಲಾಗಿತ್ತು.
25.12.1924 ರಂದು ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ಜನಿಸಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಜನಿಸಿದ್ದರು. ಪಂಜಾಬಿನ ಅಮೃ ತ ಸರದಲ್ಲಿ 24.12.1924 ರಂದು ಜನಿಸಿದ್ದ ಮೊಹಮ್ಮದ್ ರಫಿಯವರು ತಮ್ಮ ಕಂಚಿನ ಕಂಠದ ಗಾಯನದಿಂದ ಇಡೀ ಜಗತ್ತಿನಲ್ಲಿ ಪ್ರಸಿದ್ಧರಾಗಿದ್ದರು. ಗಾಯನ ಕ್ಷೇತ್ರದಲ್ಲಿ ಅವರು ತಮಗಿಂತ ಹಿರಿಯರಾಗಿ ರುವ ದಿ. ಲತಾ ಮಂಗೇಶ್ಕರ್, ಮುಕೇಶ್, ಶಂಕರ್ ಜೈಕಿಷನ, ಓ ಪಿ ನಯರ್ ಹಾಗೂ ಸಮಕಾಲೀನರಾಗಿರುವ ಕಿಶೋರ್ ಕುಮಾರ್, ಮಹೇಂದ್ರ ಕಪೂರ್, ಮನ್ನಾಡೆ ಮುಂತಾದ ಕಲಾವಿದರನ್ನು ಗೌರವದಿಂದ ಕಾಣುತ್ತಿದ್ದರು. “”ಮನ ತರಸತ ಹರಿ ದರಶನ ಕೊ ಆಜ, ಓ ದುನಿಯಾಕೆ ರಖವಾ ಲೆ, ಸುಖಕೆ ಸಬ ಸಾಥಿ, ದುಖ ಮೇ ನ ಕೋಯಿ, ಮೇರೆ ರಾಮ,”” ಗಳಂತಹ ಸುಪ್ರಸಿದ್ಧ ಭಕ್ತಿಗೀತೆ ಹಾಗೂ ಭಜನೆಗಳನ್ನು ಹಾಡುವ ಮೂಲಕ ತಾವು ಇತರ ಸಮುದಾಯದವರ ಬಗ್ಗೆ ಅಪಾರ ಕಾಳಜಿ ಹೊಂದಿರು ವುದಾಗಿ ತೋರಿಸಿ ಕೊಟ್ಟಿದ್ದರು ಎಂದು ನುಡಿದರು. ಎಲ್ಲಾ ಸಹ ಗಾಯಕರು ಹಾಗೂ ಸಮಸ್ತ ಸಂಗೀತಗಾರರ ಜೊತೆಯಲ್ಲಿ ಗಾಯನ ಮಾಡುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಹಾಗೂ ಒಂದು ಕಪ್ಪು ಚುಕ್ಕೆ ಇಲ್ಲದ ಯಶಸ್ವಿ ವೈವಾಹಿಕ ಜೀವನ ವನ್ನು ನಡೆಸಿದ್ದರು ಎಂದು ಮೊಹಮ್ಮದ್ ರಫಿ ಅವರನ್ನು ಕುರಿತು ಕೊಂಡಾ ಡಿದರು. ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅರವಿಂದ ಕುಲಕರ್ಣಿಯವರು ಮಾತ ನಾಡಿ, ಭಾರತವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡುವಲ್ಲಿ ಈ ಇಬ್ಬರೂ ಮಹನೀಯರ ಪಾತ್ರವು ಬಹಳ ಮುಖ್ಯ ವಾಗಿತ್ತು . ಇವರು ತಮ್ಮ ಸಂಪೂರ್ಣ ಜೀವನವನ್ನು ಎಲ್ಲ ಸಮುದಾಯದವರ ಶಾಂತಿ ಹಾಗೂ ಸಹ ಬಾಳ್ವೆಗಾಗಿ ಸವೆಸಿದ್ದರು ಎಂದು ನುಡಿದರು. ಕಾರಂಜಾ ಮುಳುಗಡೆ ಸಂತ್ರ ಸ್ತರ ಹಿತರಕ್ಷಣ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಪಾಟೀಲ್ ಹೋಚಕನಳ್ಳಿ ಯವರು ಮಾತನಾಡಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ರೈತರ ಬಗ್ಗೆ ಬಹಳಷ್ಟು ಕಾಳಜಿ ಹೊಂದಿದ್ದರು. ಅವರ ಅಧಿ ಕಾರಾವಧಿಯಲ್ಲಿ ರೈತರಿಗೆ ತೊಂದರೆಗಳು ಆಗಿರಲಿಲ್ಲ ವೆಂದು ನೆನಪಿಸಿಕೊಂಡರು.
ಇಬ್ಬರು ಮಹಾನುಭಾವರ ಜನ್ಮದಿನದ ಅಂಗವಾಗಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಿಕ್ಷಣಪ್ಪ ಪಾಟೀಲ್ ಕಾಲ್ ಮಾಡಿ ಶೇಷನಪ್ಪ ಪಾಟೀಲ್ ಮೊಹಮ್ಮದ್ ಅಲಿ ಅಣ್ಣಪ್ಪ ಪಟವಾರಿ ಸಯ್ಯದ್ ಪಡೆಸಾಬ್ ಬಸವರಾಜ ಪಾಟೀಲ್ ರಾಮಕೃಷ್ಣ ಜ ಮಾದಾರ್ ಮಾರುತಿ ಕೇಯಪ್ಪ, ವಿಜಯ್ ಕುಮಾರ್, ಸಾಧಕಲಿ, ಮೋಹನರಾವ್, ರಾಜಪ್ಪ ಕಮಾಲಪುರ್ ,ಪದ್ಮಾನಂದಕಾಶಿನಾಥ ಮುಂತಾದವರು ಭಾಗವಹಿಸಿದ್ದರು.